ಕೊರೋನ ವೈರಸ್‌ಗೆ ಬ್ರಿಟನ್ ಬಾಕ್ಸರ್ ಅಂಥೋನಿ ಯಾರ್ಡಿ ತಂದೆ ಬಲಿ

Update: 2020-03-30 14:21 GMT

ಲಂಡನ್, ಮಾ.29: ಬ್ರಿಟಿಷ್ ಬಾಕ್ಸರ್ ಅಂಥೋನಿ ಯಾರ್ಡಿ ಅವರ ತಂದೆ ಕೊರೋನ ವೈರಸ್‌ಗೆ ಬಲಿಯಾಗಿದ್ದಾರೆ. ತನ್ನ ತಂದೆಯ ಸಾವಿನ ಸುದ್ದಿ ಖಚಿತಪಡಿಸಿದ ಯಾರ್ಡಿ, ಜನರು ದಯವಿಟ್ಟು ಮನೆಯಿಂದ ಹೊರ ಬರಬೇಡಿ ಎಂದು ವಿನಂತಿಸಿದ್ದಾರೆ.

   ‘‘ನನ್ನ ತಂದೆಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಅವರು ಚೆನ್ನಾಗಿಯೇ ಇದ್ದರು. ಆದರೆ ನಿನ್ನೆ ಅವರು ಕೊರೋನ ವೈರಸ್‌ನಿಂದಾಗಿ ಸಾವನ್ನಪ್ಪಿದ್ದಾರೆ. ಜನರು ಪರಿಸ್ಥಿತಿಗೆ ಗೌರವ ನೀಡಿ ಮನೆಯಲ್ಲಿ ಉಳಿಯಬೇಕು. ನಾನು ತಂದೆಯ ಸಾವಿನಿಂದ ಆಘಾತಕ್ಕೊಳಗಾಗಿದ್ದೇನೆ. ನನಗಾಗಿರುವ ಆಘಾತ ಜನರು ಮನೆಯಲ್ಲಿ ಉಳಿಯಲು ನೆರವಾಗಬಹುದು’’ ಎಂದು ಯಾರ್ಡಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News