ಮಕ್ಕಳ ಆಹಾರಕ್ಕೆ ಸಹಾಯಹಸ್ತ ಚಾಚಿದ ರಶ್‌ಫೋರ್ಡ್

Update: 2020-03-31 08:33 GMT

ಲಂಡನ್, ಮಾ.30: ಉಚಿತ ಶಾಲಾ ಊಟವನ್ನೇ ನೆಚ್ಚಿಕೊಂಡಿದ್ದ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲು ಮ್ಯಾಂಚೆಸ್ಟರ್ ಯುನೈಟೆಡ್ ಫಾರ್ವರ್ಡ್ ಆಟಗಾರ ಮಾರ್ಕಸ್ ರಶ್‌ಫೋರ್ಡ್ ಸಹಾಯಹಸ್ತ ಚಾಚಿದ್ದಾರೆ.

ಕೊರೋನ ವೈರಸ್‌ನಿಂದಾಗಿ ಶಾಲೆಯೂ ಸ್ಥಗಿತಗೊಂಡ ಪರಿಣಾಮ ಮಕ್ಕಳು ಊಟಕ್ಕಾಗಿ ಪರದಾಟ ನಡೆಸುತ್ತಿದ್ದರು. ಶಾಲೆಗಳು ಮುಚ್ಚಲ್ಪಟ್ಟ ಬಳಿಕ ಊಟಕ್ಕೂ ಪರದಾಡುತ್ತಿದ್ದ ಮ್ಯಾಂಚೆಸ್ಟರ್ ಪ್ರದೇಶದ ಮಕ್ಕಳಿಗೆ ನೆರವಾಗಲು ಮುಂದಾಗಿರುವ ಚಾರಿಟಿ ಫೇರ್ ಶೇರ್‌ನೊಂದಿಗೆ ಇಂಗ್ಲೆಂಡ್‌ನ 22ರ ಹರೆಯದ ಫುಟ್ಬಾಲ್ ಆಟಗಾರ ರಶ್‌ಫೋರ್ಡ್ ಕೈಜೋಡಿಸಿದ್ದಾರೆ. ನನ್ನ ಬಾಲ್ಯವು ಮುಂದಿನ ಪೀಳಿಗೆಗೆ ಬದಲಾವಣೆ ತರಲು ಪ್ರೇರೇಪಿಸಿತು ಎಂದ ರಶ್‌ಪೋರ್ಡ್, ‘‘ಮಕ್ಕಳಿಗೆ ಸಂಬಂಧಿಸಿ ನಾನು ಈ ಹಿಂದೆ ಸಾಕಷ್ಟು ಕೆಲಸ ಮಾಡಿದ್ದೆ. ಶಾಲೆಗಳು ಬಂದ್ ಆಗಿವೆ ಎಂಬ ಸುದ್ದಿ ಕೇಳಿದ ತಕ್ಷಣ ಶಾಲೆಗೆ ಹೋಗಲು ಅಸಾಧ್ಯವಾಗಿರುವ ಮಕ್ಕಳಿಗೆ ಊಟ ನೀಡಬೇಕೆಂಬ ಯೋಚನೆ ನನ್ನ ಮನಸ್ಸಿಗೆ ಬಂತು. ನಾನು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ನನಗೂ ಉಚಿತ ಊಟ ಲಭಿಸುತ್ತಿತ್ತು. ನನ್ನ ತಾಯಿ ಆರು ಗಂಟೆಯ ತನಕ ಮನೆಗೆ ಬರುತ್ತಿರಲಿಲ್ಲ. ಹೀಗಾಗಿ ನನ್ನ ಮುಂದಿನ ಊಟ 8 ಗಂಟೆಗೆ ಸಿಗುತ್ತಿತ್ತು. ಆಗ ಮನೆಯಲ್ಲಿ ಊಟ ಮಾಡಲು ಸಾಧ್ಯವಿಲ್ಲದ ಎಷ್ಟೋ ಮಕ್ಕಳಿದ್ದರು. ಹಾಗಾಗಿ ನಾನು ಆ ನಿಟ್ಟಿನಲ್ಲಿ ಅದೃಷ್ಟಶಾಲಿಯಾಗಿದ್ದೆ’’ ಎಂದು ಬಿಬಿಸಿಗೆ ರಶ್‌ಫೋರ್ಡ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News