ಐಟಿಟಿಎಫ್ ವಿಶ್ವ ಚಾಂಪಿಯನ್‌ಶಿಪ್ ಹೊಸ ದಿನಾಂಕಗಳ ಪ್ರಕಟ

Update: 2020-04-08 11:43 GMT

 ಲೌಸನ್ನೆ, ಎ.7 : ಮಾರ್ಚ್ 2020 ಕ್ಕೆ ನಿಗದಿಯಾಗಿದ್ದ ಐಟಿಟಿಎಫ್‌ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್ ಈಗ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 4 ರವರೆಗೆ ನಡೆಯಲಿದೆ ಎಂದು ಸ್ಪೋರ್ಟ್ಸ್‌ಐಟಿಟಿಎಫ್ ಆಡಳಿತ ಮಂಡಳಿ ಮಂಗಳವಾರ ಪ್ರಕಟಿಸಿದೆ.

  ಕೊರೋನ ವೈರಸ್ ಏಕಾಏಕಿ ಏರಿಕೆಯ ಹಿನ್ನೆಲೆಯಲ್ಲಿ ಈ ವರ್ಷ ಮುಂದೂಡಲ್ಪಟ್ಟ ಹಲವು ಅಂತರ್‌ರಾಷ್ಟ್ರಿಯ ಟೇಬಲ್ ಟೆನಿಸ್ ಫೆಡರೇಶನ್ (ಐಟಿಟಿಎಫ್) ಈವೆಂಟ್‌ಗಳಲ್ಲಿ ಅತ್ಯಂತ ಮಹತ್ವದ ವಾರ್ಷಿಕ ಟೇಬಲ್ ಟೆನಿಸ್ ಈವೆಂಟ್ 2020 ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ಗಳು ಸೇರಿವೆ.

ಮೂಲತಃ ಮಾರ್ಚ್ 22-29ರ ನಡುವೆ ಬುಸಾನ್‌ನಲ್ಲಿ ನಡೆಯಬೇಕಿದ್ದ ಟೂರ್ನಿಯನ್ನು ಐಟಿಟಿಎಫ್ ತುರ್ತು ಕಾರ್ಯಕಾರಿ ಸಮಿತಿ ಸಭೆ ಜೂನ್ 21-28ರ ತಾತ್ಕಾಲಿಕ ದಿನಾಂಕಗಳನ್ನು ಪ್ರಸ್ತಾಪಿಸಿತ್ತು ಮತ್ತು ಸಾಂಕ್ರಾಮಿಕ ರೋಗವು ಮುಂದುವರಿದರೆ ಟೂರ್ನಿ ಇನ್ನಷ್ಟು ಮುಂದುವರಿಯುವ ಸಾಧ್ಯತೆ ಇದೆ .

   ಮಾರ್ಚ್ 29, 2020ರಂದು ಐಟಿಟಿಎಫ್ ಕಾರ್ಯಕಾರಿ ಸಮಿತಿಯು ಹನಾ ಬ್ಯಾಂಕ್ 2020 ವಿಶ್ವ ತಂಡ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ಗಾಗಿ ಹೊಸ ದಿನಾಂಕಗಳನ್ನು ಘೋಷಿಲಾಗುವುದು ಎಂದು ದೃಢೀಕರಿಸಲು ಮುಂದಿನ ಸಭೆಯನ್ನು ನಡೆಸಿತು. ಪ್ರಸ್ತುತ ಯೋಜಿಸಲಾದ ಎಲ್ಲಾ ಐಟಿಟಿಎಫ್ ಟೂರ್ನಿಗಳನ್ನು ಮತ್ತು ಚಟುವಟಿಕೆಗಳನ್ನು 30 ಜೂನ್ 2020 ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಐಟಿಟಿಎಫ್ ಹೇಳಿಕೆಯಲ್ಲಿ ತಿಳಿಸಿದೆ.

  ಈಗ ಸೆಪ್ಟೆಂಬರ್ 27ಕ್ಕೆ ಹೊಸ ತಾತ್ಕಾಲಿಕ ದಿನಾಂಕಗಳನ್ನು ಪ್ರಸ್ತಾಪಿಸಲಾಗಿದ್ದು, ಅಕ್ಟೋಬರ್ 4, 2020ರ ತನಕ ನಡೆಯಲಿದೆ. ಐಟಿಟಿಎಫ್ ಮತ್ತು ಕೆಟಿಟಿಎ (ಕೊರಿಯನ್ ಟಿಟಿ ಸಮಿತಿ ) ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಿದೆ. ಆಟಗಾರರು, ಕೋಚ್ , ಅಭಿಮಾನಿಗಳು ಮತ್ತು ಅಧಿಕಾರಿಗಳ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News