ಐಪಿಎಲ್ ಒಪ್ಪಂದ ಉಳಿಸಲು ಆಸ್ಟ್ರೇಲಿಯದ ಕ್ರಿಕೆಟಿಗರು ಕೊಹ್ಲಿಯನ್ನು ಛೇಡಿಸುತ್ತಿರಲಿಲ್ಲ: ಕ್ಲಾರ್ಕ್

Update: 2020-04-08 12:38 GMT

 ಮೆಲ್ಬೊರ್ನ್, ಎ.7: ತಮ್ಮ ಲಾಭದಾಯಕ ಐಪಿಎಲ್ ಒಪ್ಪಂದಗಳನ್ನು ಉಳಿಸಿಕೊಳ್ಳಲು ಆಸ್ಟ್ರೇಲಿಯದ ಆಟಗಾರರು ಎಷ್ಟು ಉತ್ಸುಕರಾಗಿದ್ದರೆಂದರೆ ಒಂದು ಅವಧಿಯಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಅವರನ್ನು ಮೈದಾನದಲ್ಲಿ ಛೇಡಿಸಲು ಹೆದರುತ್ತಿದ್ದರು. ಭಾರತದ ನಾಯಕನ ಬಗ್ಗೆ ಅಷ್ಟೊಂದು ಗೌರವ ಹೊಂದಿದ್ದ ಆಸ್ಟ್ರೇಲಿಯದ ಆಟಗಾರರನ್ನು ಭಾರತದ ಆಟಗಾರರು ಛೇಷ್ಟೆ ಮಾಡುತ್ತಿದ್ದರು ಎಂದು ಮಾಜಿ ನಾಯಕ ಮೈಕ್ ಕ್ಲಾರ್ಕ್ ಹೇಳಿದ್ದಾರೆ

     

ಭಾರತ ಮತ್ತು ಆಸ್ಟ್ರೇಲಿಯ ಕೆಲವು ಸ್ಮರಣೀಯ ದ್ವಿಪಕ್ಷೀಯ ಒಪ್ಪಂದಗಳನ್ನು ಹೊಂದಿವೆ ಆದರೆ ಆಸ್ಟ್ರೇಲಿಯನ್ನರು ಭಾರತವನ್ನು ಎದುರಿಸುವಾಗಲೆಲ್ಲಾ, ಅವರ ಕಣ್ಣುಗಳು ಪ್ರತಿ ವರ್ಷ ಎಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಶ್ರೀಮಂತ ಐಪಿಎಲ್ ಪಂದ್ಯಗಳ ಮೇಲೆ ಕೇಂದ್ರಿಕೃತವಾಗುತ್ತಿತ್ತು ಎಂದು ಕ್ಲಾರ್ಕ್ ಅಭಿಪ್ರಾಯಪಟ್ಟರು. ಐಪಿಎಲ್‌ನೊಂದಿಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅಥವಾ ದೇಶಿಯವಾಗಿ ಭಾರತದ ಕ್ರಿಕೆಟ್ ಎಷ್ಟು ಪ್ರಬಲವಾಗಿದೆ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ ಎಂದು ಕ್ಲಾರ್ಕ್ ಬಿಗ್ ಸ್ಪೋರ್ಟ್ಸ್ ಬ್ರೇಕ್‌ಫಾಸ್ಟ್‌ಗೆ ತಿಳಿಸಿದರು. ಆಸ್ಟ್ರೇಲಿಯದ ಕ್ರಿಕೆಟ್ ಮತ್ತು ಬಹುಶಃ ಇತರ ಎಲ್ಲ ತಂಡಗಳು ಭಾರತದ ಆಟಗಾರರಿಗೆ ವಿರುದ್ಧವಾಗಿ ನಡೆದುಕೊಂಡರೆ ಐಪಿಎಲ್‌ನಲ್ಲಿ ಅವಕಾಶ ಕೈತಪ್ಪಬಹುದೆಂದು ಭಾವಿಸಿರಬಹುದು ಎಂದು ಕ್ಲಾರ್ಕ್ ಹೇಳಿದರು. ‘‘ನಾನು ಕೊಹ್ಲಿಯನ್ನು ಸ್ಲೆಡ್ಜ್ ಮಾಡಲು ಹೋಗುವುದಿಲ್ಲ, ಅವರು ನನ್ನನ್ನು ಬೆಂಗಳೂರಿಗೆ ಆಯ್ಕೆ ಮಾಡಬೇಕೆಂದು ನಾನು ಬಯಸುತ್ತೇನೆ, ಹಾಗಾಗಿ ನನಗೆ ಆರು ವಾರಗಳಗಳಲ್ಲಿ 1 ಮಿಲಿಯನ್ ಡಾಲರ್ ಗಳಿಸಬಹುದು ಎಂದು ಹೇಳಿರುವುದನ್ನು ಕ್ಲಾರ್ಕ್ ನೆನಪಿಸಿಕೊಂಡಿದ್ದಾರೆ. /*/**************

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News