ದ. ಕೊರಿಯದಿಂದ ಅಮೆರಿಕಕ್ಕೆ 6 ಲಕ್ಷ ಕೊರೋನ ವೈರಸ್ ಪರೀಕ್ಷಾ ಕಿಟ್

Update: 2020-04-13 15:31 GMT

ಸಿಯೋಲ್, ಎ. 13: ಅಮೆರಿಕಕ್ಕೆ 6 ಲಕ್ಷ ಕೊರೋನ ವೈರಸ್ ಪರೀಕ್ಷಾ ಕಿಟ್‌ಗಳನ್ನು ಕಳುಹಿಸಲು ದಕ್ಷಿಣ ಕೊರಿಯ ನಿರ್ಧರಿಸಿದೆ ಎಂದು ದೇಶದ ಅಧಿಕಾರಿಯೊಬ್ಬರು ಸೋಮವಾರ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಅವೆುರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನವಿ ಮಾಡಿದ ಬಳಿಕ, ದಕ್ಷಿಣ ಕೊರಿಯ ಈ ತೀರ್ಮಾನಕ್ಕೆ ಬಂದಿದೆ. ಟ್ರಂಪ್ ಮಾರ್ಚ್ 25ರಂದು ದಕ್ಷಿಣ ಕೊರಿಯ ಅಧ್ಯಕ್ಷ ಮೂನ್ ಜೇ-ಇನ್‌ಗೆ ಟೆಲಿಫೋನ್ ಕರೆ ಮಾಡಿ ಪರೀಕ್ಷಾ ಕಿಟ್‌ಗಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದ್ದರು. ಅಮೆರಿಕ ನೋವೆಲ್-ಕೊರೋನ ವೈರಸ್‌ನ ಭೀಕರ ದಾಳಿಗೆ ತುತ್ತಾಗಿದ್ದು, ಅಲ್ಲಿ ಸಾವಿಗೀಡಾದವರ ಸಂಖ್ಯೆ 22,000ವನ್ನು ದಾಟಿದೆ.

ಅಮೆರಿಕದ ಕೇಂದ್ರೀಯ ತುರ್ತು ಪರಿಸ್ಥಿತಿ ನಿರ್ವಹಣೆ ಸಂಸ್ಥೆಯ ಸರಕು ವಿಮಾನವೊಂದು ಮಂಗಳವಾರ ಈ ಪರೀಕ್ಷಾ ಕಿಟ್‌ಗಳನ್ನು ಅಮೆರಿಕಕ್ಕೆ ಒಯ್ಯಲಿದೆ.

ಮುಂದಿನ ಹಂತದಲ್ಲಿ ಇನ್ನೂ 1.50 ಲಕ್ಷ ಪರೀಕ್ಷಾ ಕಿಟ್‌ಗಳನ್ನು ದಕ್ಷಿಣ ಕೊರಿಯ ಅಮೆರಿಕಕ್ಕೆ ಕಳುಹಿಸಿಕೊಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News