1.16 ಲಕ್ಷ ಮೀರಿದ ಕೊರೋನ ಸಾವಿನ ಸಂಖ್ಯೆ
Update: 2020-04-13 22:45 IST
ಲಂಡನ್, ಎ. 13: ನೂತನ-ಕೊರೋನವೈರಸ್ ಸಾಂಕ್ರಾಮಿಕದಿಂದಾಗಿ ಸಂಭವಿಸಿದ ಜಾಗತಿಕ ಸಾವಿನ ಸಂಖ್ಯೆ ಸೋಮವಾರ ರಾತ್ರಿಯ ವೇಳೆಗೆ 1,16,046ಕ್ಕೆ ಏರಿದೆ ಹಾಗೂ ಒಟ್ಟು ಜಾಗತಿಕ ಸೋಂಕು ಪ್ರಕರಣಗಳ ಸಂಖ್ಯೆ 18,73,879ನ್ನು ತಲುಪಿದೆ.
ಅದೇ ವೇಳೆ, ಮಾರಕ ಸೋಂಕಿಗೆ ಒಳಗಾದವರ ಪೈಕಿ 4,35,185 ಮಂದಿ ಚೇತರಿಸಿಕೊಂಡಿದ್ದಾರೆ.
ಕೊರೋನ ವೈರಸ್ ಸಾವಿನ ಪಟ್ಟಿಯ ಅಗ್ರ ಸ್ಥಾನದಲ್ಲಿ ಅಮೆರಿಕವಿದ್ದು, ಅಲ್ಲಿ 22,134 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಇಟಲಿಯಿದ್ದು, 19,899 ಮಂದಿ ಮೃತಪಟ್ಟಿದ್ದಾರೆ.
ನಂತರದ ಸ್ಥಾನದಲ್ಲಿ 17,489 ಸಾವುಗಳೊಂದಿಗೆ ಸ್ಪೇನ್ ಇದೆ. ಫ್ರಾನ್ಸ್‌ನಲ್ಲಿ 14,393 ಮಂದಿ ಕೊರೋನವೈರಸ್‌ಗೆ ಬಲಿಯಾಗಿದ್ದಾರೆ. ಬ್ರಿಟನ್‌ನಲ್ಲಿ ಸಾವಿಗೀಡಾದವರ ಸಂಖ್ಯೆ 11,329ಕ್ಕೆ ಏರಿದೆ. ಇರಾನ್‌ನಲ್ಲಿ 4,585 ಮಂದಿ ಸಾವಿಗೀಡಾಗಿದ್ದಾರೆ.