×
Ad

ಕೊರೋನದಿಂದ ಚೇತರಿಸಿಕೊಂಡವರು ಪ್ರತಿರೋಧ ಶಕ್ತಿ ಹೊಂದುತ್ತಾರೆಯೇ ?

Update: 2020-04-20 22:00 IST

ಪ್ಯಾರಿಸ್ (ಫ್ರಾನ್ಸ್), ಎ. 20: ಕೋವಿಡ್-19ಗೆ ಕಾರಣವಾಗುವ ವೈರಸನ್ನು ವೈರಾಣು ತಜ್ಞರು ಪತ್ತೆಹಚ್ಚಿರುವರಾದರೂ, ಒಂದು ಮಹತ್ವದ ಪ್ರಶ್ನೆಯು ಉತ್ತರವಿಲ್ಲದೇ ಉಳಿದುಕೊಂಡಿದೆ. ಈ ಕಾಯಿಲೆಯಿಂದ ಚೇತರಿಸಿಕೊಂಡವರು ರೋಗಕ್ಕೆ ಪ್ರತಿರೋಧ ಶಕ್ತಿ ಹೊಂದುತ್ತಾರೆಯೇ?

ಈ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ ಎಂದು ಪರಿಣತರು ಹೇಳುತ್ತಾರೆ. ಆದರೆ, ಒಮ್ಮೆ ಈ ರೋಗಕ್ಕೆ ಒಳಗಾದರೆ ಸ್ವಲ್ಪ ಅವಧಿಗಾದರೂ ರೋಗಕ್ಕೆ ಪ್ರತಿರೋಧ ಶಕ್ತಿ ಉಂಟಾಗುತ್ತದೆ ಎಂದು ಹೆಚ್ಚಿನವರು ನಂಬಿದ್ದಾರೆ.

ದಡಾರ (ಮೀಸಲ್ಸ್) ಮುಂತಾದ ಕೆಲವು ವೈರಸ್ ಕಾಯಿಲೆಗಳು ಒಮ್ಮೆ ಗುಣವಾದರೆ, ಜೀವನಪೂರ್ತಿ ಆ ರೋಗದ ವಿರುದ್ಧ ಪ್ರತಿರೋಧ ಶಕ್ತಿ ಬೆಳೆಯುತ್ತದೆ.

ಆದರೆ, ನೋವೆಲ್-ಕೊರೋನವೈರಸ್‌ನಂಥ ಆರ್‌ಎನ್‌ಎ ಆಧಾರಿತ ವೈರಸ್‌ಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಪ್ರತಿಕಾಯಗಳು ಬೆಳೆಯಲು ಸುಮಾರು 3 ವಾರಗಳು ಬೇಕಾಗುತ್ತವೆ. ಆಗಲೂ, ಈ ಪ್ರತಿಕಾಯಗಳು ಕೆಲವೇ ತಿಂಗಳುಗಳಿಗೆ ರೋಗದಿಂದ ರಕ್ಷಣೆ ಕೊಡಬಹುದಾಗಿದೆ ಎಂದು ಮಾರ್ಸಿಲಿಸ್‌ನಲ್ಲಿ ಸಾರ್ವಜನಿಕ ಆಸ್ಪತ್ರೆ ವ್ಯವಸ್ಥೆಯಲ್ಲಿ ಇಮ್ಯೂನಾಲಜಿ ಪ್ರೊಫೆಸರ್ ಆಗಿರುವ ಎರಿಕ್ ವಿವಿಯರ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News