ಶಾಲೆಗಳ ಮುಚ್ಚುಗಡೆಯಿಂದ 154 ಕೋಟಿ ವಿದ್ಯಾರ್ಥಿಗಳು ಅತಂತ್ರ

Update: 2020-04-22 17:31 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಎ. 22: ಕೋವಿಡ್-19 ಸಾಂಕ್ರಾಮಿಕ ಸ್ಫೋಟದ ಹಿನ್ನೆಲೆಯಲ್ಲಿ, ಜಗತ್ತಿನಾದ್ಯಂತ ಶಿಕ್ಷಣ ಸಂಸ್ಥೆಗಳು ಮುಚ್ಚಿರುವುದರಿಂದ 154 ಕೋಟಿಗೂ ಅಧಿಕ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಶೈಕ್ಷಣಿಕ ಮತ್ತು ಮಕ್ಕಳ ಸಂಸ್ಥೆ (ಯುನೆಸ್ಕೊ) ಹೇಳಿದೆ. ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿನಿಯರ ಮೇಲೆ ಸಾಂಕ್ರಾಮಿಕ ಬಿಕ್ಕಟ್ಟು ಹೆಚ್ಚಿನ ಪರಿಣಾಮ ಬೀರಿದ್ದು, ಅವರು ಶಾಲೆಗಳಿಂದ ಹೊರಬೀಳುವ ಪ್ರಮಾಣವನ್ನು ಹೆಚ್ಚಲಿದೆ ಹಾಗೂ ಶಿಕ್ಷಣದಲ್ಲಿನ ಲಿಂಗಾನುಪಾತವನ್ನು ಹೆಚ್ಚಿಸಲಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

ಶಾಲೆಗಳು ಮುಚ್ಚಿರುವುದರಿಂದ ವಿದ್ಯಾರ್ಥಿನಿಯರು ಹೆಚ್ಚಿನ ಋಣಾತ್ಮಕ ಪರಿಣಾಮಗಳಿಗೆ ಒಳಗಾಗಲಿದ್ದಾರೆ. ಹೆಣ್ಣು ಮಕ್ಕಳು ಶಾಲೆಗಳಿಂದ ಹೊರಬೀಳುವ ಪ್ರಮಾಣ ಇದರಿಂದ ಹೆಚ್ಚಲಿದೆ. ಹದಿಹರಯದ ವಿದ್ಯಾರ್ಥಿನಿಯರು ಬಲವಂತದ ಮದುವೆಗಳಿಗೆ ಒಳಗಾಗಿ ಅವರ ಮೇಲೆ ಲೈಂಗಿಕ ಶೋಷಣೆ ನಡೆಯಬಹುದು ಹಾಗೂ ಅವರು ಅಪ್ರಾಪ್ರ ಪ್ರಾಯದಲ್ಲೇ ಗರ್ಭಿಣಿಯರಾಗಬಹುದು ಎಂದು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಯುನೆಸ್ಕೊದ ಶಿಕ್ಷಣಕ್ಕಾಗಿನ ಸಹಾಯಕ ಮಹಾ ನಿರ್ದೇಶಕಿ ಸ್ಟೀಫಾನಿಯಾ ಗಿಯಾನಿನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News