ದ.ಕೊರಿಯ: 10 ಮಂದಿಗೆ ಸೋಂಕು ದೃಢ

Update: 2020-04-26 17:43 GMT

ಸೋಲ್,ಎ.26:ದಕ್ಷಿಣ ಕೊರಿಯದಲ್ಲಿ ಕಳೆದ 24 ತಾಸುಗಳಲ್ಲಿ 10 ಕೊರೋನ ಸೋಂಕಿನ ಇನ್ನೂ 10 ಪ್ರಕರಣಗಳು ದೃಢಪಟ್ಟಿವೆ. ಕಳೆದ 9 ದಿನಗಳಿಂದ ದಕ್ಷಿಣ ಕೊರಿಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ದೈನಂದಿನ ಹೆಚ್ಚಳ 20ಕ್ಕಿಂತ ಕೆಳಗೆ ಇಳಿದಿರುವುದು ಗಮನಾರ್ಹವಾಗಿದೆ.

ಈ ಹೊಸ ಪ್ರಕರಣಗಳೊಂದಿಗೆ ದಕ್ಷಿಣ ಕೊರಿಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 10,728ಕ್ಕೇರಿದೆ ಹಾಗೂ ಈವರೆಗೆ 242 ಮಂದಿ ಸಾವನ್ನಪ್ಪಿದ್ದಾರೆ. 8717 ರೋಗಿಗಳು ಚೇತರಿಸಿಕೊಂಡಿದ್ದು, ಕ್ವಾರಂಟೈನ್‌ನಿಂದ ಬಿಡುಗಡೆಗೊಂಡಿದ್ದಾರೆ.

ಕೊರೋನಾ ಹಾವಳಿ ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ಜಾರಿಗೊಳಿಸಲಾಇದ್ದ ಸುಕ್ಷಿತ ಅಂತರದ ನಿಯಮಗಳನ್ನು ದಕ್ಷಿಣ ಕೊರಿಯ ಇತ್ತೀಚೆಗೆ ಸಡಿಲುಗೊಳಿಸಿದೆ.ಆದಾಗ್ಯೂ, ಸೋಂಕು ಪೀಡಿತರು ರೋಗದ ಗುಣಲಕ್ಷಣಗಳನ್ನು ಪ್ರದರ್ಶಿಸದೆಯೇ, ವೈರಸ್‌ನ್ನು ಹರಡುವ ಅಪಾವಿದೆಯೆಂದು ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

   ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಆರಂಭದ ನಡುವೆ ದಕ್ಷಿಣ ಕೊರಿಯದಲ್ಲಿ ಪ್ರತಿ ದಿನ ಕೊರೋನ ಸೋಂಕಿನ ನೂರಾರು ಹೊಸ ಪ್ರಕರಣಗಳು ದಾಖಲಾಗಿದ್ದವು. ಸೋಂಕಿನ ಬಹುತೇಕ ಡೇಗ್ ಮಹಾನಗರ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ವರದಿಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News