ಕೊರೋನಾ ಸಂಶೋಧನೆಗೆ ಪ್ಲಾಸ್ಮಾ ನೀಡಲು ಮುಂದಾದ ನಟ ಟಾಮ್ ಹ್ಯಾಂಕ್ಸ್ ದಂಪತಿ
Update: 2020-04-26 23:22 IST
ವಾಶಿಂಗ್ಟನ್,ಎ.26: ಕೊರೋನ ವೈರಸ್ ಸೋಂಕಿನಿಂದ ಚೇತರಿಸಿಕೊಂಡಿರುವ ಹಿರಿಯ ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ಹಾಗೂ ಅವರ ಪತ್ನಿ ರೀಟಾ ವಿಲ್ಸನ್ ಅವರು ಈ ಮಾರಕ ರೋಗದ ವಿರುದ್ಧ ಲಸಿಕೆಯನ್ನು ಅಭಿವೃದ್ಧಿಪಡಿಸುವುದಕ್ಕೆ ನೆರವಾಗಲು ತಮ್ಮ ರಕ್ತ ಹಾಗೂ ಪ್ಲಾಸ್ಮಾವನ್ನು ದಾನ ಮಾಡುವ ಕೊಡುಗೆ ನೀಡಿದ್ದಾರೆ.
ಕೊರೋನ ವೈರಸ್ ಕುರಿತ ಸಂಶೋಧನೆಗಾಗಿ ತಮ್ಮ ರಕ್ತ ಹಾಗೂ ಪ್ಲಾಸ್ಮಾವನ್ನು ದಾನ ಮಾಡುವುದಾಗಿ ತಿಳಿಸಿದ್ದಾರೆ. ಕಳೆದ ತಿಂಗಳು ಫಾರೆಸ್ಟ್‌ಗಂಪ್ ಖ್ಯಾತಿಯ ಟಾಮ್ ಹ್ಯಾಂಕ್ಸ್ ಹಾಗೂ ಅವರ ಪತ್ನಿ ರೀಟಾ ವಿಲ್ಸನ್ ಅವರಿಗೆ ಕೊರೊನಾ ಸೊಂಕು ತಗಲಿರುವುದು ಪತ್ತೆಯಾಗಿತ್ತು.