12 ತಿಂಗಳಲ್ಲಿ ಕೊರೋನ ಲಸಿಕೆ ಸಿದ್ಧಗೊಳ್ಳಬಹುದು: ಬಿಲ್ ಗೇಟ್ಸ್

Update: 2020-04-27 16:08 GMT

 ನ್ಯೂಯಾರ್ಕ್, ಎ. 27: ನೋವೆಲ್-ಕೊರೋನ ವೈರಸ್‌ಗೆ ಲಸಿಕೆ ಕಂಡುಹಿಡಿಯುವುದಕ್ಕೆ ಸಂಬಂಧಿಸಿ, ಏಳು ಅತ್ಯಂತ ಹೆಚ್ಚು ಭರವಸೆದಾಯಕ ಕಲ್ಪನೆಗಳನ್ನು ಕಾರ್ಯರೂಪಕ್ಕೆ ತರಲು ಬಿಲಿಯಾಧೀಶ ಉದ್ಯಮಿ ಬಿಲ್ ಗೇಟ್ಸ್ ಆರ್ಥಿಕ ನೆರವು ನೀಡುತ್ತಿದ್ದಾರೆ.

‘‘ಎಲ್ಲವೂ ಸರಿಯಾದ ರೀತಿಯಲ್ಲಿ ನಡೆದರೆ, ಒಂದು ವರ್ಷದಲ್ಲಿ ನಾವು ಲಸಿಕೆ ಉತ್ಪಾದನೆಯನ್ನು ಆರಂಭಿಸುತ್ತೇವೆ’’ ಎಂದು ಸಿಎನ್‌ಎನ್‌ನ ‘ಫರೀದ್ ಝಕಾರಿಯ ಜಿಪಿಎಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ಗೇಟ್ಸ್ ತಿಳಿಸಿದರು. ‘‘ಆದರೆ, ಲಸಿಕೆ ಉತ್ಪಾದನೆಗೆ ಎರಡು ವರ್ಷ ಬೇಕಾಗಲೂಬಹುದು’’ ಎಂದು ಅವರು ಅಭಿಪ್ರಾಯಪಟ್ಟರು.

ಕೆಲವರು ಹೇಳಿರುವಂತೆ, ಲಸಿಕೆ ಉತ್ಪಾದನೆಯು ಸೆಪ್ಟಂಬರ್‌ನಲ್ಲಿ ಆರಂಭವಾಗಲಾರದು ಎಂದು ಮೈಕ್ರೋಸಾಫ್ಟ್ ಕಂಪೆನಿಯ ಸ್ಥಾಪಕ ಹಾಗೂ ಜಗತ್ತಿನ ಎರಡನೇ ಅತಿ ಶ್ರೀಮಂತ ಹೇಳಿದರು.

‘‘ಲಸಿಕೆ ಉತ್ಪಾದನೆಗೆ 18 ತಿಂಗಳುಗಳು ಬೇಕಾಗಬಹುದು ಎಂಬ ವಿಚಾರದಲ್ಲಿ ಡಾ. ಫೌಸಿ ಮತ್ತು ನಾನು ಹೆಚ್ಚಿನ ಒಮ್ಮತ ಹೊಂದಿದ್ದೇವೆ. ಇದೇನೂ ಅತಿ ದೀರ್ಘಾವಧಿಯಲ್ಲ’’ ಎಂದು ಗೇಟ್ಸ್ ಹೇಳಿದರು. ಡಾ. ಆ್ಯಂಟನಿ ಫೌಸಿ ರಾಷ್ಟ್ರೀಯ ಅಲರ್ಜಿ ಮತ್ತು ಸೋಂಕು ರೋಗಗಳ ಸಂಸ್ಥೆಯ ನಿರ್ದೇಶಕರಾಗಿದ್ದಾರೆ ಹಾಗೂ ಶ್ವೇತಭವನದ ಕೊರೋನವೈರಸ್ ಟಾಸ್ಕ್ ಫೋರ್ಸ್‌ನ ಸದಸ್ಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News