ಭ್ರಷ್ಟಾಚಾರ: ನವಾಝ್ ಶರೀಫ್ ವಿರುದ್ಧ ಬಂಧನಾದೇಶ

Update: 2020-04-27 16:16 GMT

ಲಾಹೋರ್, ಎ. 27: 34 ವರ್ಷದ ಹಿಂದಿನ ಜಮೀನು ಸಂಬಂಧಿ ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯು ಮಾಜಿ ಪ್ರಧಾನಿ ನವಾಝ್ ಶರೀಫ್ ವಿರುದ್ಧ ಬಂಧನಾದೇಶ ಹೊರಡಿಸಿದೆ.

ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್ ಪಕ್ಷದ ಮುಖ್ಯಸ್ಥ, 70 ವರ್ಷದ ಶರೀಫ್ ಈಗ ವೈದ್ಯಕೀಯ ಚಿಕಿತ್ಸೆಗಾಗಿ ಲಂಡನ್‌ನಲ್ಲಿದ್ದಾರೆ.

1986ರಲ್ಲಿ ಶರೀಫ್ ಪಂಜಾಬ್ ಪ್ರಾಂತದ ಮುಖ್ಯಮಂತ್ರಿಯಾಗಿದ್ದಾಗ ವಿವಾದದಲ್ಲಿರುವ ಜಮೀನನ್ನು ‘ಜಂಗ್’ ಪತ್ರಿಕಾ ಸಮೂಹದ ಪ್ರಧಾನ ಸಂಪಾದಕ ಮಿರ್ ಶಕೀಲುರ್ ರಹಮಾನ್‌ಗೆ ಕಾನೂನುಬಾಹಿರವಾಗಿ ಲೀಸ್‌ನಲ್ಲಿ ನೀಡಿದ್ದರು ಎಂದು ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋ (ಎನ್‌ಎಬಿ) ಅಧಿಕಾರಿಗಳು ಹೇಳಿದ್ದಾರೆ.

ಮೂರು ಬಾರಿ ಪ್ರಧಾನಿಯಾಗಿರುವ ಶರೀಫ್ ಹಲವು ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News