×
Ad

ಫ್ರಾನ್ಸ್: ದೈನಂದಿನ ಸಾವಿನ ಸಂಖ್ಯೆಯಲ್ಲಿ ಭಾರೀ ಇಳಿಕೆ

Update: 2020-04-27 22:01 IST

ಪ್ಯಾರಿಸ್ (ಫ್ರಾನ್ಸ್), ಎ. 27: ಫ್ರಾನ್ಸ್‌ನಲ್ಲಿ ನೂತನ-ಕೊರೋನ ವೈರಸ್‌ನಿಂದಾಗಿ ಸಾಯುವವರ ಸಂಖ್ಯೆಯಲ್ಲಿ ರವಿವಾರ ಭಾರೀ ಇಳಿಕೆ ದಾಖಲಾಗಿದೆ. ಅಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 242 ಮಂದಿ ಮೃತಪಟ್ಟಿದ್ದಾರೆ. ಇದು ಹಿಂದಿನ ದಿನದ ಸಂಖ್ಯೆಗಿಂತ ಮೂರನೇ ಒಂದಕ್ಕೂ ಹೆಚ್ಚಿನ ಭಾಗದಷ್ಟು ಕಡಿಮೆಯಾಗಿದೆ.

ಫ್ರಾನ್ಸ್‌ನಲ್ಲಿ ಈವರೆಗೆ ಸಾಂಕ್ರಾಮಿಕದಿಂದಾಗಿ ಮೃತಪಟ್ಟವರ ಸಂಖ್ಯೆ 22,856ನ್ನು ತಲುಪಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ಆಸ್ಪತ್ರೆಗಳಲ್ಲಿ 152 ಮಂದಿ ಮೃತಪಟ್ಟಿದ್ದಾರೆ. ಇದು ಐದು ವಾರಗಳಲ್ಲೇ ಕನಿಷ್ಠ ದೈನಂದಿನ ಸಂಖ್ಯೆಯಾಗಿದೆ. 90 ಮಂದಿ ಆರೈಕೆ ಮನೆ (ನರ್ಸಿಂಗ್ ಹೋಮ್)ಗಳಲ್ಲಿ ಸಾವನ್ನಪ್ಪಿದ್ದಾರೆ.

ಫ್ರಾನ್ಸ್‌ನಾದ್ಯಂತ ಒಟ್ಟು 28,217 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News