ಆನ್‌ಲೈನ್ ಚಾಂಪಿಯನ್‌ಶಿಪ್ ಶೂಟರ್‌ನ್ನು ಒತ್ತಡಕ್ಕೆ ಸಿಲುಕಿಸಿದೆ: ಮಾಜಿ ಶೂಟರ್ ಶರೀಫ್

Update: 2020-04-29 06:04 GMT

ಹೊಸದಿಲ್ಲಿ, ಎ.29: ಆನ್‌ಲೈನ್ ಅಂತರ್‌ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್ ಅಗ್ರ ಶೂಟರ್‌ಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಜಾಗೃತಗೊಳಿಸಲು ಮತ್ತು ಅವರನ್ನು ಸ್ವಲ್ಪ ಒತ್ತಡಕ್ಕೆ ಸಿಲುಕಿಸಲು ಸಮರ್ಥವಾಗಿದೆ ಎಂದು ಭಾರತದ ಮಾಜಿ ಶೂಟರ್ ಶಿಮೊನ್ ಶರೀಫ್ ಹೇಳಿದ್ದಾರೆ.

ಅವರು ಕಳೆದ ಶನಿವಾರ ವರ್ಚುವಲ್ ಪಂದ್ಯಾವಳಿಯ ಎರಡನೇ ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಕಾರಣದಿಂದಾಗಿ ಜಗತ್ತು ಲಾಕ್‌ಡೌನ್ ಆಗಿದೆ. ಈ ಸಮಯದಲ್ಲಿ ಇದು ನಿಯಮಿತ ವ್ಯವಹಾರವಾಗಲಿದೆ ಎಂಬ ಆಶಾವಾದ ವ್ಯಕ್ತಪಡಿಸಿದ್ದಾರೆ.

ವಾಸ್ತವವಾಗಿ ಸಾಮಾನ್ಯ ಸ್ಥಿತಿಗೆ ಮರಳಿದಾಗಲೂ ಮತ್ತು ಕ್ರೀಡಾಕೂಟಗಳು ಹೊರಾಂಗಣದಲ್ಲಿ ಪುನರಾರಂಭಗೊಂಡಾಗಲೂ ಇದೇ ರೀತಿಯ ಪಂದ್ಯಾವಳಿಗಳನ್ನು ಆಯೋಜಿಸಬಹುದು ಎಂದು ಅವರು ಹೇಳಿದರು.ಪಂದ್ಯಾವಳಿಯ ನಂತರ ಭಾಗವಹಿಸಿದ ಶೂಟರ್‌ಗಳಾದ ದಿವ್ಯಾನ್ಶ್ ಸಿಂಗ್ ಪನ್ವಾರ್, ಮನು ಭಾಕರ್ (ಇವರು ಮೊದಲ ಆವೃತ್ತಿಯಲ್ಲೂ ಸ್ಪರ್ಧಿಸಿದ್ದರು) ಮತ್ತು ಸಂಜೀವ್ ರಜಪೂತ್ ಅವರು ಒಂದೇ ರೀತಿಯ ಒತ್ತಡವನ್ನು ಅನುಭವಿಸಿರುವುದಾಗಿ ಹೇಳಿದ್ದಾರೆ ಎಂದು ಶರೀಫ್ ಪಿಟಿಐಗೆ ತಿಳಿಸಿದರು.

ಒಲಿಂಪಿಕ್ಸ್ ಮತ್ತು ವಿಶ್ವಕಪ್ ಪದಕ ವಿಜೇತ ಗಗನ್ ನಾರಂಗ್ ಈ ಕಾರ್ಯಕ್ರಮವನ್ನು ಅನುಮೋದಿಸಿದ್ದಾರೆ.

‘‘ಮೆಹುಲಿ ಅವರಿಗೆ ಭಾಗವಹಿಸಲು ಸಾಧ್ಯವಾಗಲಿಲ್ಲ ಏಕೆಂದರೆ ಅವರ ಗುರಿ ವ್ಯವಸ್ಥೆಯನ್ನು ಇನ್ನೂ ಹೊಂದಿಸಲಾಗಿಲ್ಲ. ಆದರೆ ಅವರು ಅದನ್ನು ನೇರಪ್ರಸಾರ ವೀಕ್ಷಿಸಿದ್ದರು. ಅವರಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಜಾಗೃತಗೊಳಿಸಿತು ಮತ್ತು ಸಾಧ್ಯವಾದಷ್ಟು ಬೇಗ ಮರಳುವಂತೆ ಮಾಡಿತ್ತು’’ ಎಂದು ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಶರೀಫ್ ಹೇಳಿದರು.

ಕಳೆದ ಎರಡು ವಾರಗಳಲ್ಲಿ ಯಶಸ್ಸನ್ನು ಸವಿಯುವ ಮೂಲಕ, ಇಂಡಿಯನ್ ಶೂಟಿಂಗ್.ಕಾಮ್ ಪೋರ್ಟಲ್‌ನ್ನು ನಡೆಸುತ್ತಿರುವ ಶರೀಫ್ ಆಶಾದಾಯಕವಾಗಿ ಎದುರು ನೋಡುತ್ತಿದ್ದಾರೆ. ಲಾಕ್‌ಡೌನ್ ಮತ್ತು ಕಠಿಣ ಕ್ರಮಗಳ ಹೊರತಾಗಿಯೂ ಶೂಟರ್‌ಗಳು ತಮ್ಮ ಕ್ರೀಡೆಯೊಂದಿಗೆ ಮತ್ತೆ ತೊಡಗಿಸಿಕೊಳ್ಳಲು ಸಹಾಯ ಮಾಡಲು ಸಾಧ್ಯವಾಯಿತು ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News