ಅಮೆರಿಕ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕನ್ನಡಿಗ ಅರುಣ ಕುಮಾರ್ ಆಯ್ಕೆ

Update: 2020-04-29 06:07 GMT

ಮುಂಬೈ, ಎ.29: ಕರ್ನಾಟಕದ ಮಾಜಿ ಕ್ರಿಕೆಟಿಗ ಜೆ.ಅರುಣ ಕುಮಾರ್ ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಕ್ರಿಕೆಟ್ ವಲಯದಲ್ಲಿ ‘ಜಾಕ್’ ಎಂದು ಪರಿಚಿತರಾಗಿರುವ ಅರುಣ ಕುಮಾರ್ ಕೋಚ್ ಹುದ್ದೆಯನ್ನು ವಹಿಸಿಕೊಳ್ಳಲಿದ್ದು, ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲಿದ್ದಾರೆ. ಅವರು ಕೆಲಸದ ವೀಸಾವನ್ನು ಪಡೆದಿದ್ದಾರೆ ಎಂದು ಮಂಗಳವಾರ ಬೆಳಗ್ಗೆ ಅಮೆರಿಕದ ಕ್ರಿಕೆಟ್ ಅಧಿಕೃತವಾಗಿ ಘೋಷಿಸಿದೆ.

ಕರ್ನಾಟಕದ ಓರ್ವ ಅತ್ಯಂತ ಯಶಸ್ವಿ ಕೋಚ್ ಆಗಿದ್ದ ಅರುಣ್ 2013-14 ಹಾಗೂ 2014-15 ರ ಋತುವಿನಲ್ಲಿ ಸತತ ಎರಡು ಬಾರಿ ದೇಶಿಯ ಕ್ರಿಕೆಟ್‌ನ ಪ್ರಮುಖ ಮೂರು ಪ್ರಶಸ್ತಿಗಳಾದ ರಣಜಿ ಟ್ರೋಫಿ, ವಿಜಯ ಹಝಾರೆ ಟ್ರೋಫಿ ಹಾಗೂ ಇರಾನಿ ಕಪ್ ಜಯಿಸಲು ಮಾರ್ಗದರ್ಶನ ನೀಡಿದ್ದರು. 45ರ ಹರೆಯದ ಅರುಣ್ ಐಪಿಎಲ್‌ನ ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿಯಲ್ಲಿ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News