160 ಕೋಟಿ ಕಾರ್ಮಿಕರ ಜೀವನೋಪಾಯ ಅನಿಶ್ಚಿತ: ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆ

Update: 2020-04-30 16:52 GMT

ನ್ಯೂಯಾರ್ಕ್, ಎ. 30: ಕೋವಿಡ್-19 ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಯಲು ಜಗತ್ತಿನಾದ್ಯಂತ ಬೀಗಮುದ್ರೆ ಹೇರಲಾಗಿರುವ ಹಿನ್ನೆಲೆಯಲ್ಲಿ, ಕೆಲಸದ ಅವಧಿ ಕಡಿಮೆ ಆಗಿದ್ದು, ಅನೌಪಚಾರಿಕ ವಲಯದಲ್ಲಿ ಕೆಲಸ ಮಾಡುತ್ತಿರುವ ಸುಮಾರು 160 ಕೋಟಿ ಕಾರ್ಮಿಕರು ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆ ಹೇಳಿದೆ. ಇದು ಜಾಗತಿಕ ಕಾರ್ಮಿಕ ಸಂಖ್ಯೆಯ ಸುಮಾರು ಅರ್ಧದಷ್ಟಾಗಿದೆ.

ಚಿಲ್ಲರೆ ಮಾರಾಟ ಮತ್ತು ಉತ್ಪಾದನೆ ಕ್ಷೇತ್ರ ಸೇರಿದಂತೆ ಅತ್ಯಂತ ಹೆಚ್ಚಿನ ದುಷ್ಪರಿಣಾಮಕ್ಕೆ ಒಳಗಾಗಿರುವ 43 ಕೋಟಿಗೂ ಅಧಿಕ ಉದ್ಯಮಗಳು ತೀವ್ರ ಅಡೆತಡೆಗಳನ್ನು ಎದುರಿಸುವ ಅಪಾಯಕ್ಕೆ ಒಳಗಾಗಿವೆ ಎಂದು ವಿಶ್ವಸಂಸ್ಥೆಯ ಘಟಕವಾಗಿರುವ ಕಾರ್ಮಿಕ ಸಂಘಟನೆ ತಿಳಿಸಿದೆ.

ಜಾಗತಿಕ ಮಟ್ಟದಲ್ಲಿ ಸುಮಾರು 330 ಕೋಟಿ ಕೆಲಸಗಾರರಿದ್ದಾರೆ. ಅವರ ಪೈಕಿ 200 ಕೋಟಿ ಮಂದಿ ಅನೌಪಚಾರಿಕ ಆರ್ಥಿಕತೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಕಾರ್ಮಿಕ ಮಾರುಕಟ್ಟೆಯಲ್ಲಿ ಅತ್ಯಂತ ಕಡೆಗಣಿಸಲ್ಪಟ್ಟ ಕಾರ್ಮಿಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News