ಅಮೆರಿಕದ ಕ್ಯೂಬ ರಾಯಭಾರ ಕಚೇರಿಯ ಮೇಲೆ ಗುಂಡು ಹಾರಾಟ

Update: 2020-04-30 17:05 GMT

ವಾಶಿಂಗ್ಟನ್, ಎ. 30: ವಾಶಿಂಗ್ಟನ್‌ನಲ್ಲಿರುವ ಕ್ಯೂಬ ರಾಯಭಾರ ಕಚೇರಿಯ ಮೇಲೆ ವ್ಯಕ್ತಿಯೋರ್ವ ಗುರುವಾರ ಮುಂಜಾನೆ ಗುಂಡು ಹಾರಿಸಿರುವ ಘಟನೆಯೊಂದು ವರದಿಯಾಗಿದೆ. ಗುಂಡು ಹಾರಿಸಿದಾತನನ್ನು ಬಳಿಕ ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ.

ಅಜ್ಞಾತ ವ್ಯಕ್ತಿಯು ಪ್ರಬಲ ಬಂದೂಕೊಂದರಿಂದ ರಾಯಭಾರ ಕಚೇರಿಯ ಮೇಲೆ ಹಲವು ಸುತ್ತು ಗುಂಡು ಹಾರಿಸಿದನು ಎಂದು ವರದಿಗಳು ಹೇಳಿವೆ.

ಕ್ಯೂಬ ರಾಯಭಾರ ಕಚೇರಿಯ ಮೇಲೆ ಗುಂಡು ಹಾರಿಸಲಾಗಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಇಂದು ಮುಂಜಾನೆ ಸುಮಾರು 2:15ಕ್ಕೆ ಅಮೆರಿಕದ ಗುಪ್ತಚರ ದಳದ ಅಧಿಕಾರಿಗಳ ತಂಡವೊಂದು ಅಲ್ಲಿಗೆ ಧಾವಿಸಿದೆ ಎಂದು ಸೀಕ್ರೆಟ್ ಸರ್ವಿಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಪರವಾನಿಗೆರಹಿತ ಪ್ರಬಲ ಬಂದೂಕು ಹೊಂದಿರುವುದಕ್ಕಾಗಿ ಹಾಗೂ ಹತ್ಯೆ ಮಾಡುವ ಉದ್ದೇಶದಿಂದ ಗುಂಡು ಹಾರಿಸಿರುವುದಕ್ಕಾಗಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News