ಗ್ರೆಟಾರಿಂದ ಕೊರೋನ ವಿರುದ್ಧದ ಹೋರಾಟಕ್ಕೆ ಲಕ್ಷ ಡಾಲರ್ ದೇಣಿಗೆ

Update: 2020-04-30 17:29 GMT

ವಿಶ್ವಸಂಸ್ಥೆ, ಎ. 30: ಸ್ವೀಡನ್‌ನ ಪರಿಸರ ಹೋರಾಟಗಾರ್ತಿ ಗ್ರೆಟಾ ತನ್‌ಬರ್ಗ್, ಡ್ಯಾನಿಶ್ ಫೌಂಡೇಶನ್ ಒಂದರಿಂದ ಗೆದ್ದಿರುವ ಒಂದು ಲಕ್ಷ ಡಾಲರ್ (ಸುಮಾರು 76 ಲಕ್ಷ ರೂಪಾಯಿ) ನಗದು ಪ್ರಶಸ್ತಿಯನ್ನು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್)ಗೆ ದೇಣಿಗೆ ನೀಡಿದ್ದಾರೆ ಎಂದು ವಿಶ್ವಸಂಸ್ಥೆ ಗುರುವಾರ ತಿಳಿಸಿದೆ. ಈ ಹಣವನ್ನು ಕೋವಿಡ್-19 ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಬಳಸಿಕೊಳ್ಳಬೇಕೆಂಬ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದಾರೆ ಎಂದು ಅದು ಹೇಳಿದೆ.

ಪರಿಸರ ಬಿಕ್ಕಟ್ಟಿನಂತೆಯೇ, ಕೊರೋನವೈರಸ್ ಸಾಂಕ್ರಾಮಿಕವೂ ಮಕ್ಕಳ ಹಕ್ಕುಗಳ ಬಿಕ್ಕಟ್ಟಾಗಿದೆ ಎಂದು 17 ವರ್ಷದ ಪರಿಸರ ಹೋರಾಟಗಾರ್ತಿ ಹೇಳಿರುವುದಾಗಿ ಯುನಿಸೆಫ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ಸಾಂಕ್ರಾಮಿಕವು ಈಗ ಮತ್ತು ದೀರ್ಘಾವಧಿಯಲ್ಲೂ ಎಲ್ಲ ಮಕ್ಕಳನ್ನು ಬಾಧಿಸುವುದು. ಆದರೆ, ದುರ್ಬಲ ಗುಂಪುಗಳ ಮೇಲೆ ಇದರ ಪರಿಣಾಮವು ಹೆಚ್ಚಿನ ಪ್ರಮಾಣದಲ್ಲಿ ಆಗುತ್ತದೆ ಎಂದು ಗ್ರೆಟಾ ತನ್‌ಬರ್ಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News