ನ.19ರಿಂದ 28ರ ತನಕ ಅಬುಧಾಬಿ ಟಿ-10 ಲೀಗ್

Update: 2020-05-06 08:15 GMT

ಅಬುಧಾಬಿ, ಮೇ 5: ಇಂಗ್ಲೆಂಡ್‌ನವಿಶ್ವಕಪ್ ವಿಜೇತ ನಾಯಕ ಇಯಾನ್ ಮೊರ್ಗನ್ ಸಹಿತ ಅಗ್ರ ಕ್ರಿಕೆಟಿಗರು ಭಾಗವಹಿಸಲಿರುವ ಅಬುಧಾಬಿ ಟಿ-10 ಟೂರ್ನ ಮೆಂಟ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನವೆಂಬರ್ 19ರಿಂದ 28ರ ತನಕ ನಡೆಯಲಿದೆ.

 ಕೊರೋನ ವೈರಸ್ ಸಾಂಕ್ರಾಮಿಕ ರೋಗ ಕ್ರಿಕೆಟ್ ಕ್ಯಾಲೆಂಡರ್‌ನ ಮೇಲೆ ತೀವ್ರ ಪರಿಣಾಮಬೀರುತ್ತಿರುವ ಹೊರತಾಗಿಯೂ ಅಬುಧಾಬಿ ಟಿ-10 ಟೂರ್ನಿಯ ದಿನಾಂಕವನ್ನು ದೃಢಪಡಿಸಲಾಗಿದೆ.

10 ಓವರ್ ಮಾದರಿಯ ಕ್ರಿಕೆಟ್ ಟಿ-10 ಲೀಗ್ ಯುಎಇನಲ್ಲಿ ನಡೆಯಲಿದ್ದು, ಇದಕ್ಕೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಮಾನ್ಯತೆ ಇದೆ. ಟೂರ್ನಮೆಂಟ್‌ನಲ್ಲಿ ರೌಂಡ್ ರಾಬಿನ್ ಸುತ್ತಿನ ಬಳಿಕ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ನಡೆಯಲಿದೆ. ಪ್ರತಿ ಪಂದ್ಯದ ಅವಧಿ 90 ನಿಮಿಷಗಳು.

2020ರ ಆವೃತ್ತಿಯ ಟೂರ್ನಿ ಯನ್ನು ಅಬುಧಾಬಿ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ, ಅಬುಧಾಬಿ ಕ್ರೀಡಾ ಕೌನ್ಸಿಲ್ ಹಾಗೂ ಅಬುಧಾಬಿ ಕ್ರಿಕೆಟ್ ಆಯೋಜಿಸುತ್ತಿವೆ. ಕಳೆದ ಆವೃತ್ತಿಯ ಟಿ-10 ಲೀಗ್ 10 ದಿನಗಳ ಕಾಲ ಶೇಖ್ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದು, 1,20,000 ಅಭಿಮಾನಿಗಳು ವೀಕ್ಷಿಸಿದ್ದರು. 2019ರ ಆವೃತ್ತಿಯ ಲೀಗ್‌ನ್ನು ಡ್ವೇಯ್ನಿ ಬ್ರಾವೊ ನೇತೃತ್ವದ ಮರಾಠಅರೇಬಿಯನ್ಸ್ ತಂಡ ಗೆದ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News