×
Ad

ಕೊರೋನ ವೈರಸ್ ಪುರುಷರನ್ನು ಹೆಚ್ಚು ಬಾಧಿಸಲು ಕಾರಣ ತಿಳಿಸಿದ ವಿಜ್ಞಾನಿಗಳು

Update: 2020-05-11 23:05 IST

ಲಂಡನ್, ಮೇ 11: ಮಾನವರ ಜೀವಕೋಶಗಳಿಗೆ ಸೋಂಕು ಹರಡಲು ನೂತನ-ಕೊರೋನ ವೈರಸ್ ಬಳಸುವ ಪ್ರಮುಖ ಕಿಣ್ವ (ಎಂಝೈಮ್)ವೊಂದರ ಪ್ರಮಾಣ ಮಹಿಳೆಯರಿಗಿಂತಲೂ ಪುರುಷರ ರಕ್ತದಲ್ಲಿ ಹೆಚ್ಚಾಗಿದೆ ಎಂದು ಯುರೋಪ್‌ನಲ್ಲಿ ನಡೆದ ಅಧ್ಯಯನವೊಂದು ತಿಳಿಸಿದೆ. ಕೊರೋನ ವೈರಸ್ ಸೋಂಕಿಗೆ ಮಹಿಳೆಯರಿಗಿಂತಲು ಹೆಚ್ಚು ಪುರುಷರು ಯಾಕೆ ಬಲಿಬೀಳುತ್ತಾರೆ ಎನ್ನುವುದಕ್ಕೆ ಈ ಸಂಶೋಧನೆ ವಿವರಣೆ ನೀಡಬಹುದಾಗಿದೆ.

ಆ್ಯಂಜಿಯೊಟೆನ್‌ಸಿನ್-ಕನ್ವರ್ಟಿಂಗ್ ಎಂಝೈಮ್ 2 (ಎಸಿಇ2) ಹೃದಯ, ಮೂತ್ರಪಿಂಡಗಳು ಮತ್ತು ಇತರ ಅಂಗಗಳಲ್ಲಿ ಕಾಣಿಸಿಕೊಳ್ಳುತ್ತವೆ. ಕೋವಿಡ್-19 ಎಂಬ ಶ್ವಾಸಕೋಶದ ಕಾಯಿಲೆಯಲ್ಲಿ, ಸೋಂಕು ಶ್ವಾಸಕೋಶಗಳಿಗೆ ಹರಡುವಲ್ಲಿ ಈ ಕಿಣ್ವ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಲಾಗಿದೆ.

ಎಸಿಇ ಇನ್‌ಹಿಬಿಟರ್ಸ್‌ ಅಥವಾ ಆ್ಯಂಜಿಯೊಟೆನ್‌ಸಿನ್ ರಿಸೆಪ್ಟರ್ ಬ್ಲಾಕರ್ಸ್‌ (ಎಆರ್‌ಬಿ) ಎಂಬ ಔಷಧಗಳು ಎಸಿಇ2 ಕಿಣ್ವ ಅಧಿಕ ಪ್ರಮಾಣದಲ್ಲಿ ಜಮೆಗೊಳ್ಳಲು ಅವಕಾಶ ನೀಡುವುದಿಲ್ಲ. ಹಾಗಾಗಿ, ಈ ಔಷಧಿಗಳನ್ನು ತೆಗೆದುಕೊಳ್ಳುವವರು ಕೋವಿಡ್-19 ಸೋಂಕಿಗೆ ಒಳಗಾಗುವ ಪ್ರಮಾಣ ಕಡಿಮೆ ಎಂಬುದಾಗಿಯೂ ಯುರೋಪಿಯನ್ ಹಾರ್ಟ್ ಜರ್ನಲ್‌ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News