ಅಮೆರಿಕ: 24 ಗಂಟೆಯಲ್ಲಿ 1,680 ಸಾವು

Update: 2020-05-16 15:06 GMT

ವಾಶಿಂಗ್ಟನ್, ಮೇ 16: ಅಮೆರಿಕದಲ್ಲಿ ನೂತನ-ಕೊರೋನ ವೈರಸ್‌ನಿಂದಾಗಿ ಕಳೆದ 24 ಗಂಟೆಗಳ ಅವಧಿಯಲ್ಲಿ 1,680 ಸಾವುಗಳು ಸಂಭವಿಸಿವೆ. ಇದರೊಂದಿಗೆ ಆ ದೇಶದಲ್ಲಿ ಈ ಸಾಂಕ್ರಾಮಿಕದಿಂದಾಗಿ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆ 87,493ಕ್ಕೆ ಏರಿದೆ.

ದೇಶದಲ್ಲಿ ಈವರೆಗೆ ದಾಖಲಾದ ಒಟ್ಟು ಕೊರೋನ ವೈರಸ್ ಸಾವಿನ ಸಂಖ್ಯೆ ಈಗ 14,42,924ಕ್ಕೆ ಏರಿದೆ ಎಂದು ಬಾಲ್ಟಿಮೋರ್‌ನಲ್ಲಿರುವ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯ ಸಂಗ್ರಹಿಸಿರುವ ಅಂಕಿ-ಅಂಶಗಳು ತಿಳಿಸಿವೆ.

ಸ್ಪೇನ್: ದಿನದಲ್ಲಿ 102 ಸಾವು; 8 ವಾರಗಳಲ್ಲೇ ಕನಿಷ್ಠ

ಸ್ಪೇನ್‌ನಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಕಳೆದ 24 ಗಂಟೆಗಳ ಅವಧಿಯಲ್ಲಿ 102 ಮಂದಿ ಸಾವಿಗೀಡಾಗಿದ್ದಾರೆ ಎಂದು ದೇಶದ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿವೆ. ಇದು ಎಂಟು ವಾರಗಳಲ್ಲೇ ಒಂದು ದಿನದಲ್ಲಿ ಸಂಭವಿಸಿದ ಅತಿ ಕಡಿಮೆ ಸಂಖ್ಯೆಯ ಸಾವಾಗಿದೆ.

ಇದರೊಂದಿಗೆ ಈ ಮಾರಕ ಸಾಂಕ್ರಾಮಿಕದಿಂದಾಗಿ ದೇಶದಲ್ಲಿ ಸಂಭವಿಸಿದ ಸಾವಿನ ಸಂಖ್ಯೆ 27,563ಕ್ಕೆ ಏರಿದೆ. ಅದೇ ವೇಳೆ, ದೇಶದಲ್ಲಿ ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 2,30,698ಕ್ಕೆ ಏರಿದೆ ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News