×
Ad

ಕೊರೋನ ಸೋಂಕು ಪ್ರಕರಣದಲ್ಲಿ ಸ್ಪೇನನ್ನು ಹಿಂದಿಕ್ಕಿದ ಬ್ರೆಝಿಲ್

Update: 2020-05-17 22:49 IST

ಬ್ರೆಸೀಲಿಯ (ಬ್ರೆಝಿಲ್), ಮೇ 17: ಕೊರೋನ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಬ್ರೆಝಿಲ್ ಸ್ಪೇನನ್ನು ಹಿಂದಿಕ್ಕಿ ಜಗತ್ತಿನಲ್ಲೇ ನಾಲ್ಕನೇ ಸ್ಥಾನವನ್ನು ಪಡೆದಿದೆ. ದೇಶದಲ್ಲಿ ಶನಿವಾರ 14,919 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 2,33,142ಕ್ಕೆ ಏರಿದೆ ಎಂದು ಸರಕಾರಿ ಅಂಕಿಸಂಖ್ಯೆಗಳು ತಿಳಿಸಿವೆ.

ಅದು ಈಗ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಅಮೆರಿಕ, ರಶ್ಯ ಮತ್ತು ಬ್ರಿಟನ್ ನಂತರದ ಸ್ಥಾನದಲ್ಲಿದೆ. ಸ್ಪೇನ್‌ನಲ್ಲಿ ಒಟ್ಟು 2,30,698 ಸೋಂಕು ಪ್ರಕರಣಗಳು ಈವರೆಗೆ ವರದಿಯಾಗಿವೆ.

ಬ್ರೆಝಿಲ್‌ನ ಹೊಸ ಪ್ರಕರಣಗಳಲ್ಲಿ ದೇಶದ ಉಪಾಧ್ಯಕ್ಷ ಹ್ಯಾಮಿಲ್ಟನ್ ವೌರಾವೊ ಮತ್ತು ಅವರ ಪತ್ನಿ ಸೇರಿದ್ದಾರೆ. ಅವರೀಗ ಕ್ವಾರಂಟೈನ್‌ನಲ್ಲಿದ್ದಾರೆ. ಸೋಂಕು ಪೀಡಿತ ಅಧಿಕಾರಿಯೊಬ್ಬನ ಸಂಪರ್ಕಕ್ಕೆ ಬಂದ ಬಳಿಕ ಉಪಾಧ್ಯಕ್ಷರು ಸೋಂಕಿಗೆ ಒಳಗಾಗಿದ್ದಾರೆ. ಅವರು ಸೋಂಕನ್ನು ತನ್ನ ಪತ್ನಿಗೆ ವರ್ಗಾಯಿಸಿದ್ದಾರೆ.

ಒಂದು ತಿಂಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿರುವ ದೇಶದ ಆರೋಗ್ಯ ಸಚಿವ ನೆಲ್ಸನ್ ಟೈಕ್ ಎರಡು ದಿನಗಳ ಹಿಂದಷ್ಟೇ ರಾಜೀನಾಮೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News