ಹಾಂಕಾಂಗ್ ಪತ್ರಕರ್ತರೊಂದಿಗೆ ಹಸ್ತಕ್ಷೇಪ ಬೇಡ : ಚೀನಾಕ್ಕೆ ಅಮೆರಿಕ ಎಚ್ಚರಿಕೆ

Update: 2020-05-18 16:26 GMT

ವಾಶಿಂಗ್ಟನ್, ಮೇ 18: ಹಾಂಕಾಂಗ್‌ನಲ್ಲಿ ಕೆಲಸ ಮಾಡುತ್ತಿರುವ ಅಮೆರಿಕದ ಪತ್ರಕರ್ತರ ವಿಷಯದಲ್ಲಿ ಹಸ್ತಕ್ಷೇಪ ನಡೆಸದಂತೆ ಅಮೆರಿಕ ರವಿವಾರ ಚೀನಾವನ್ನು ಎಚ್ಚರಿಸಿದೆ. ಇದರೊಂದಿಗೆ, ಪತ್ರಿಕಾ ಸ್ವಾತಂತ್ರ್ಯ ಹಾಗೂ ಇತರ ವಿಷಯಗಳಲ್ಲಿ ಉಭಯ ದೇಶಗಳ ನಡುವಿನ ತಿಕ್ಕಾಟ ಮತ್ತೊಮ್ಮೆ ತಾರಕಕ್ಕೇರಿದೆ.

ಇತ್ತೀಚಿನ ತಿಂಗಳುಗಳಲ್ಲಿ ಎರಡೂ ದೇಶಗಳು ಪರಸ್ಪರರ ವರದಿಗಾರರನ್ನು ‘ಸೇಡಿಗೆ ಸೇಡು’ ಎಂಬಂತೆ ಉಚ್ಚಾಟಿಸಿವೆ. ಅದೂ ಅಲ್ಲದೆ, ಕೊರೋನ ವೈರಸ್ ಸಾಂಕ್ರಾಮಿಕದ ವಿಷಯದಲ್ಲಿ ಈ ದೇಶಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ.

ಹಾಂಕಾಂಗ್‌ನಲ್ಲಿ ಕೆಲಸ ಮಾಡುತ್ತಿರುವ ಅಮೆರಿಕದ ಪತ್ರಕರ್ತರ ಕೆಲಸದಲ್ಲಿ ಹಸ್ತಕ್ಷೇಪ ನಡೆಸುವುದಾಗಿ ಚೀನಾ ಸರಕಾರ ಬೆದರಿಕೆ ಹಾಕಿರುವುದು ಇತ್ತೀಚೆಗೆ ನನ್ನ ಗಮನಕ್ಕೆ ಬಂದಿದೆ’’ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ಈ ಪತ್ರಕರ್ತರು ಸ್ವತಂತ್ರ ಮಾಧ್ಯಮದ ಸದಸ್ಯರಾಗಿದ್ದಾರೆ, ಪ್ರಚಾರ ಕಾರ್ಯಕರ್ತರಲ್ಲ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News