ಸಹಜ ಕಾರಣಗಳಿಂದ ಚೀನಾ ರಾಯಭಾರಿ ಸಾವು: ಇಸ್ರೇಲ್
Update: 2020-05-18 22:18 IST
ಜೆರುಸಲೇಮ್, ಮೇ 18: ಇಸ್ರೇಲ್‌ಗೆ ಚೀನಾದ ರಾಯಭಾರಿ, 58 ವರ್ಷದ ಡು ವೇ ಸಹಜ ಕಾರಣಗಳಿಂದಾಗಿ ಮೃತಪಟ್ಟಿದ್ದಾರೆ ಎಂದು ನಂಬಲಾಗಿದೆ ಎಂದು ಇಸ್ರೇಲ್ ಪೊಲೀಸ್ ವಕ್ತಾರ ಮಿಕಿ ರೋಸನ್‌ಫೀಲ್ಡ್ ಹೇಳಿದ್ದಾರೆ.
ರಾಯಭಾರಿಯು ಟೆಲ್ ಅವೀವ್‌ನ ಉತ್ತರ ಭಾಗದಲ್ಲಿರುವ ತನ್ನ ಮನೆಯಲ್ಲಿ ರವಿವಾರ ಮೃತಪಟ್ಟಿರುವುದನ್ನು ಇಸ್ರೇಲ್ ವಿದೇಶ ಸಚಿವಾಲಯ ರವಿವಾರ ಖಚಿತಪಡಿಸಿದೆ.
ಕೊರೋನ ವೈರಸ್ ಸಾಂಕ್ರಾಮಿಕದ ನಡುವೆಯೇ, ಫೆಬ್ರವರಿಯಲ್ಲಿ ಡು ವೇಯನ್ನು ಚೀನಾವು ತನ್ನ ಇಸ್ರೇಲ್ ರಾಯಭಾರಿಯಾಗಿ ನೇಮಿಸಿತ್ತು.
ಇಸ್ರೇಲ್ ಚೀನಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ.