ಆರು ನೌಕರರಲ್ಲಿ ಕೋವಿಡ್-19 ಸೋಂಕು: ನೋಯ್ಡಾ ಫ್ಯಾಕ್ಟರಿ ಬಂದ್ ಮಾಡಿದ ಒಪ್ಪೊ

Update: 2020-05-18 16:54 GMT

ಹೊಸದಿಲ್ಲಿ,ಮೇ 18: ಚೀನಿ ಸ್ಮಾರ್ಟ್‌ಫೋನ್ ತಯಾರಿಕೆ ಕಂಪನಿ ಒಪ್ಪೊ ತನ್ನ ಆರು ನೌಕರರಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಗ್ರೇಟರ್ ನೋಯ್ಡಾದಲ್ಲಿಯ ತನ್ನ ಫ್ಯಾಕ್ಟರಿಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

ಶುಕ್ರವಾರವಷ್ಟೇ ಫ್ಯಾಕ್ಟರಿಯನ್ನು ಪುನರಾರಂಭಿಸಿದ್ದ ಕಂಪನಿಯು ಕರ್ತವ್ಯಕ್ಕೆ ಹಾಜರಾಗಿದ್ದ ಎಲ್ಲ ನೌಕರರನ್ನು ಕೊರೋನ ವೈರಸ್ ಪರೀಕ್ಷೆಗೊಳಪಡಿಸಿತ್ತು.

‘ನಮ್ಮೆಲ್ಲ ಉದ್ಯೋಗಿಗಳು ಮತ್ತು ನಾಗರಿಕರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ ’ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಕೆಲಸಕ್ಕೆ ಸೇರಲಿರುವ 3,000ಕ್ಕೂ ಅಧಿಕ ಉದ್ಯೋಗಿಗಳ ತಪಾಸಣೆಯನ್ನು ಆರಂಭಿಸಿರುವುದಾಗಿ ತಿಳಿಸಿರುವ ಕಂಪನಿಯು,ಇದಕ್ಕಾಗಿ ಸರಕಾರದ ಸಹಕಾರವನ್ನು ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News