ಕೊರೋನ ವೈರಸ್ ಜಗತ್ತಿಗೆ ಎಚ್ಚರಿಕೆಯ ಕರೆಗಂಟೆ: ಆಂಟೋನಿಯೊ ಗುಟೆರಸ್

Update: 2020-05-19 04:43 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಮೇ 18: ಕೊರೋನ ವೈರಸ್ ಸಾಂಕ್ರಾಮಿಕವು ಜಗತ್ತಿಗೆ ಎಚ್ಚರಿಕೆಯ ಕರೆಗಂಟೆಯಾಗಬೇಕು ಎಂದು ಸೋಮವಾರ ಹೇಳಿರುವ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್, ಈ ಜಾಗತಿಕ ಬಿಕ್ಕಟ್ಟಿನೊಂದಿಗೆ ವ್ಯವಹರಿಸುವಾಗ ಜಗತ್ತು ಹೆಚ್ಚು ಒಗ್ಗಟ್ಟಾಗಿರಬೇಕು ಎಂದು ಕರೆ ನೀಡಿದ್ದಾರೆ.

ಕೋವಿಡ್-19 ನಮ್ಮ ಯುಗದ ಅತ್ಯಂತ ದೊಡ್ಡ ಸವಾಲಾಗಿದೆ ಎಂದು ಹೇಳಿದ ಅವರು, ಈ ಸಾಂಕ್ರಾಮಿಕವು ಜಗತ್ತಿನ ದೌರ್ಬಲ್ಯವನ್ನು ಎತ್ತಿ ತೋರಿಸಿದೆ ಎಂದರು.

ಉತ್ತಮ ಜಗತ್ತೊಂದನ್ನು ನಿರ್ಮಿಸಲು ಈ ಸಾಂಕ್ರಾಮಿಕ ಬಿಕ್ಕಟ್ಟು ಅವಕಾಶವೊಂದನ್ನು ಒದಗಿಸಿದೆ ಎಂದು ಹೇಳಿದ ಅವರು, ಆದರೆ, ದೇಶಗಳು ಇದನ್ನು ಗಮನಕ್ಕೆ ತೆಗೆದುಕೊಳ್ಳುವವೇ ಎಂಬ ಪ್ರಶ್ನಿಸಿದರು.

ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಅಧಿವೇಶನ ವಿಶ್ವ ಆರೋಗ್ಯ ಸಮಾವೇಶದ ಆರಂಭದಲ್ಲಿ ಮಾತನಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News