ಕೊರೋನ ವೈರಸ್ ನಿಭಾವಣೆ: ಸ್ವತಂತ್ರ ವಿಮರ್ಶೆಗೆ ಚೀನಾ ಅಧ್ಯಕ್ಷ ಕರೆ

Update: 2020-05-18 17:20 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಮೇ 28: ಕೊರೋನ ವೈರಸ್ ಸಾಂಕ್ರಾಮಿಕವು ಒಮ್ಮೆ ನಿಯಂತ್ರಣಕ್ಕೆ ಬಂದ ಬಳಿಕ, ಅದನ್ನು ಜಗತ್ತು ನಿಭಾಯಿಸಿದ ರೀತಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದಲ್ಲಿ ಸ್ವತಂತ್ರ ವಿಮರ್ಶೆ ನಡೆಯಬೇಕು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೋಮವಾರ ಕರೆ ನೀಡಿದ್ದಾರೆ ಹಾಗೂ ಚೀನಾವು ಸಾಂಕ್ರಾಮಿಕವನ್ನು ನಿಭಾಯಿಸಿದ ರೀತಿಯನ್ನು ಸಮರ್ಥಿಸಿಕೊಂಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಅಧಿವೇಶನಕ್ಕೆ ಕಳುಹಿಸಿರುವ ವೀಡಿಯೊ ಸಂದೇಶದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ ಹಾಗೂ ಕೋವಿಡ್-19 ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ನೆರವಾಗಲು ವಿಶ್ವ ಆರೋಗ್ಯ ಸಂಸ್ಥೆಗೆ ಎರಡು ವರ್ಷಗಳ ಅವಧಿಯಲ್ಲಿ 2 ಬಿಲಿಯ ಡಾಲರ್ (ಸುಮಾರು 15,150 ಕೋಟಿ ರೂಪಾಯಿ) ನೀಡುವುದಾಗಿ ವಾಗ್ದಾನವನ್ನೂ ಮಾಡಿದ್ದಾರೆ.

ಎರಡು ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಜಗತ್ತಿನ ಹೆಚ್ಚಿನ ದೇಶಗಳ ಆರೋಗ್ಯ ಸಚಿವರು, ಚೀನಾವು ನೂತನ-ಕೊರೋನ ವೈರಸ್ ಸಾಂಕ್ರಾಮಿಕವನ್ನು ನಿಭಾಯಿಸಿದ ರೀತಿಯ ಬಗ್ಗೆ ತನಿಖೆ ನಡೆಯಬೇಕೆಂದು ಒತ್ತಾಯಿಸುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News