ಚೀನಾ: 11 ಕೋಟಿ ಜನರಿಗೆ ಮತ್ತೆ ಬೀಗಮುದ್ರೆ

Update: 2020-05-18 17:24 GMT

ಬೀಜಿಂಗ್, ಮೇ 18: ಚೀನಾದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕವು ಬಹುತೇಕ ನಿಯಂತ್ರಣಕ್ಕೆ ಬಂದಿರುವ ಹೊರತಾಗಿಯೂ, ಅಲ್ಲಿ ಎರಡನೇ ಸುತ್ತಿನ ಸೋಂಕು ಪ್ರಕರಣಗಳು ವರದಿಯಾಗಿವೆ. ದೇಶದ ಈಶಾನ್ಯ ವಲಯದಲ್ಲಿ ಈಗ ಮತ್ತೆ ಸುಮಾರು 11 ಕೋಟಿ ಜನರನ್ನು ಬೀಗಮುದ್ರೆಯಲ್ಲಿರಿಸಲಾಗಿದೆ ಎಂದು ವರದಿಯಾಗಿದೆ.

ದೇಶದಲ್ಲಿ ಸಾಮಾನ್ಯ ಜನಜೀವನವನ್ನು ಮರಳಿ ಹಳಿಗೆ ತರಲು ಆಡಳಿತವು ಪ್ರಯತ್ನಗಳನ್ನು ನಡೆಸಿರುವಂತೆಯೇ, ಜಿಲಿನ್ ಪ್ರಾಂತದ ನಗರಗಳು ರೈಲು ಮತ್ತು ಬಸ್‌ಗಳ ಸೇವೆಯನ್ನು ಸ್ಥಗಿತಗೊಳಿಸಿವೆ, ಶಾಲೆಗಳನ್ನು ಮುಚ್ಚಿವೆ ಹಾಗೂ ಲಕ್ಷಾಂತರ ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಿವೆ.

ಕೊರೋನ ವೈರಸ್ ಕೊನೆಗೊಂಡಿದೆ ಎಂದು ಸಂಭ್ರಮಿಸಿದ್ದ ಜನರು ಈ ಹೊಸ ಬೆಳವಣಿಗೆಯಿಂದ ಕಂಗಾಲಾಗಿದ್ದಾರೆ.

ಕೊರೋನ ವೈರಸ್‌ನ ಉಗಮ ಸ್ಥಳ ಎಂಬುದಾಗಿ ಪರಿಗಣಿಸಲಾಗಿರುವ ವುಹಾನ್ ನಗರದಲ್ಲಿ ಒಂದು ಹಂತದಲ್ಲಿ ಸಾಂಕ್ರಾಮಿಕದ ತೀವ್ರತೆ ಕಡಿಮೆಯಾಗಿದ್ದರೂ ಅಲ್ಲಿ ಹೊಸದಾಗಿ ಸ್ಥಳೀಯ ಮಟ್ಟದಲ್ಲಿ ಪ್ರಕರಣಗಳು ವರದಿಯಾಗುತ್ತಿವೆ. ಹಾಗಾಗಿ, ವುಹಾನ್ ನಗರದಲ್ಲಿರುವ ಎಲ್ಲರನ್ನೂ ಸಾಂಕ್ರಾಮಿಕದ ಪರೀಕ್ಷೆಗೆ ಒಳಪಡಿಸಲು ಅಲ್ಲಿನ ಆಡಳಿತವು ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News