ವಿಶ್ವಸಂಸ್ಥೆ ಬೆಂಬಲಿತ ಉದ್ಯಮ ಪರಿಸರ ಅಭಿಯಾನದಲ್ಲಿ 4 ಭಾರತೀಯ ಕಂಪೆನಿಗಳು

Update: 2020-05-19 16:49 GMT

ವಿಶ್ವಸಂಸ್ಥೆ, ಮೇ 19: ತಮ್ಮ ಕೋವಿಡ್-19 ಆರ್ಥಿಕ ನೆರವು ಮತ್ತು ಚೇತರಿಕೆ ಪ್ರಯತ್ನಗಳನ್ನು ಇತ್ತೀಚಿನ ಪರಿಸರ ವಿಜ್ಞಾನದೊಂದಿಗೆ ಸಮೀಕರಿಸುವಂತೆ ಜಗತ್ತಿನಾದ್ಯಂತದ ಸರಕಾರಗಳನ್ನು ಒತ್ತಾಯಿಸುವ ಹೇಳಿಕೆಯೊಂದಕ್ಕೆ 150ಕ್ಕೂ ಅಧಿಕ ಜಾಗತಿಕ ಕಂಪೆನಿಗಳು ಸಹಿಹಾಕಿವೆ ಹಾಗೂ ಈ ಪೈಕಿ ಭಾರತದ ನಾಲ್ಕು ಕಂಪೆನಿಗಳು ಸೇರಿವೆ.

ಬೂದು ಬಣ್ಣದ ಆರ್ಥಿಕತೆ (ಅಡೆತಡೆಗಳಿರುವ ಆರ್ಥಿಕ ಚಟುವಟಿಕೆಗಳು)ಯಿಂದ ಹಸಿರುವ ಬಣ್ಣದ (ಯಾವುದೇ ನಿರ್ಬಂಧವಿಲ್ಲ) ಆರ್ಥಿಕತೆಗೆ ಸುಲಲಿತ ಪರಿವರ್ತನೆಗೆ ಇತ್ತೀಚಿನ ಪರಿಸರ ವಿಜ್ಞಾನವು ಆದ್ಯತೆ ನೀಡುತ್ತದೆ.

ಈ ಹೇಳಿಕೆಗೆ ಸಹಿ ಹಾಕಿದ ಭಾರತೀಯ ಕಂಪೆನಿಗಳ ಪ್ರತಿನಿಧಿಗಳೆಂದರೆ ದಾಲ್ಮಿಯಾ ಸಿಮೆಂಟ್ (ಭಾರತ್) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಂದ್ರ ಸಿಂ, ಪಾಲಿಜಿಂಟ ಟೆಕ್ನಾಲಜೀಸ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ಮಕರಂದ್ ಕುಲಕರ್ಣಿ, ಟೆಕ್ ಮಹೀಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಪಿ. ಗುರ್ನಾನಿ ಮತ್ತು ವಿಪ್ರೋದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಬಿದಾಲಿ ನೀಮುಚ್ವಾಲಾ.

ಈ ಹೇಳಿಕೆಯು ಈವರೆಗಿನ ಅತಿ ದೊಡ್ಡ ವಿಶ್ವಸಂಸ್ಥೆ ಬೆಂಬಲಿತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದ ಪರಿಸರ ರಕ್ಷಣಾ ಪ್ರಯತ್ನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News