ಬೇಸಿಗೆಯಲ್ಲಿ ಕೊರೋನ ವೈರಸ್ ನಿಯಂತ್ರಣಕ್ಕೆ ಬರುವುದಿಲ್ಲ: ಅಧ್ಯಯನ

Update: 2020-05-19 17:09 GMT

ವಾಶಿಂಗ್ಟನ್, ಮೇ 19: ಉತ್ತರಾರ್ಧಗೋಳದಲ್ಲಿರುವ ಬೇಸಿಗೆಯ ಅಧಿಕ ಉಷ್ಣತೆಯು ಕೊರೋನ ವೈರಸ್ ಸಾಂಕ್ರಾಮಿಕ ಹರಡುವುದನ್ನು ಗಣನೀಯ ಪ್ರಮಾಣದಲ್ಲಿ ತಡೆಯುವ ಸಾಧ್ಯತೆ ಇಲ್ಲ ಎಂದು ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದ ಅಧ್ಯಯನವೊಂದು ತಿಳಿಸಿದೆ.

ಉಷ್ಣತೆ ಮತ್ತು ತೇವಾಂಶ ಹೆಚ್ಚಾದಂತೆ ಕೊರೋನ ವೈರಸ್ ಹರಡುವ ಪ್ರಮಾಣವು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಹವಾಮಾನ ಮತ್ತು ನೋವೆಲ್-ಕೊರೋನ ವೈರಸ್ ಹರಡುವಿಕೆಯ ನಡುವೆ ಹೆಚ್ಚೇನೂ ಸಂಬಂಧವಿಲ್ಲ ಎನ್ನುವುದನ್ನು ಕಳೆದ ಕೆಲವು ತಿಂಗಳುಗಳಲ್ಲಿ ನಡೆಸಲಾದ ಹಲವಾರು ಅಂಕಿ-ಅಂಶಗಳ ಅಧ್ಯಯನಗಳು ತಿಳಿಸಿವೆ.

ಆದರೆ, ಈ ಅಧ್ಯಯನಗಳು ಈಗ ಆರಂಭಿಕ ಹಂತಗಳಲ್ಲಷ್ಟೇ ಇವೆ. ಹವಾಮಾನ ಮತ್ತು ಕೋವಿಡ್-19 ನಡುವಿನ ನಿಖರ ಸಂಬಂಧದ ಕುರಿತ ಹೆಚ್ಚಿನ ಮಾಹಿತಿ ಯಾರಿಗೂ ಗೊತ್ತಿಲ್ಲ.

ಆದರೆ, ಸೋಮವಾರ ಸಯನ್ಸ್ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದ ಅಧ್ಯಯನ ವರದಿಯು ಅವುಗಳ ನಡುವಿನ ಸಂಬಂಧವನ್ನು ಸಾರಾಸಗಟಾಗಿ ತಳ್ಳಿಹಾಕಿಲ್ಲ. ಆದರೆ, ಕೊರೋನ ವೈರಸ್ ಮೇಲೆ ಹವಾಮಾನದ ಪರಿಣಾಮ ಕಡಿಮೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News