ನೈರುತ್ಯ ಚೀನಾದಲ್ಲಿ ಭೂಕಂಪ: 4 ಸಾವು: 24 ಮಂದಿಗೆ ಗಾಯ

Update: 2020-05-19 17:13 GMT

ಬೀಜಿಂಗ್, ಮೇ 19: ನೈರುತ್ಯ ಚೀನಾದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಭೂಕಂಪದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಹಾಗೂ 24 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಝಾವೊಟಾಂಗ್ ನಗರದ ಸಮೀಪದ ಕಿಯಾವೊಜಿಯ ಕೌಂಟಿಯಲ್ಲಿ ಭೂಮಿಯ ಮೇಲ್‌ಸ್ತರದಲ್ಲೇ ಭೂಕಂಪ ಸಂಭವಿಸಿದೆ ಹಾಗೂ ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 5.0 ಆಗಿತ್ತು ಎಂದು ಚೀನಾ ಸರಕಾರದ ಭೂಕಂಪ ಇಲಾಖೆ ತಿಳಿಸಿದೆ.

ಸುಮಾರು 600 ನೆರವು ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಯುನ್ನಾನ್ ಪ್ರಾಂತೀಯ ಸರಕಾರ ತಿಳಿಸಿದೆ. ಪರಿಹಾರ ತಂಡದಲ್ಲಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯ ಸ್ಥಳೀಯ ಘಟಕದ ಸೈನಿಕರು ಸೇರಿದ್ದಾರೆ.

2008ರಲ್ಲಿ ಸಿಚುವಾನ್ ಪ್ರಾಂತದಲ್ಲಿ ಸಂಭವಿಸಿದ ಪ್ರಬಲ 7.9ರ ತೀವ್ರತೆಯ ಭೂಕಂಪದಲ್ಲಿ 87,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News