ಬಗ್ದಾದ್: ಅಮೆರಿಕ ರಾಯಭಾರ ಕಚೇರಿ ಆವರಣದ ಮೇಲೆ ರಾಕೆಟ್ ದಾಳಿ

Update: 2020-05-19 17:15 GMT

ಬಗ್ದಾದ್, ಮೇ 19: ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಸಮೀಪ ಮಂಗಳವಾರ ಮುಂಜಾನೆ ರಾಕೆಟೊಂದು ಅಪ್ಪಳಿಸಿದೆ ಎಂದು ಭದ್ರತಾ ಮೂಲಗಳು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿವೆ. ಅತಿ ಭದ್ರತೆಯ ಹಸಿರು ವಲಯಕ್ಕೆ ರಾಕೆಟೊಂದು ಅಪ್ಪಳಿಸುತ್ತಿರುವುದು ವಾರಗಳ ಅವಧಿಯಲ್ಲೇ ಇದು ಮೊದಲ ಬಾರಿಯಾಗಿದೆ.

ರಾಕೆಟ್ ಸ್ಫೋಟಿಸಿದ ಸದ್ದು ಇರಾಕ್ ರಾಜಧಾನಿಯಾದ್ಯಂತ ಮೊಳಗಿತು ಹಾಗೂ ಅಮೆರಿಕ ರಾಯಭಾರ ಕಚೇರಿಯ ಸೈರನ್‌ಗಳು ಸದ್ದುಮಾಡಿದವು. ಆದರೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಮೂಲಗಳು ಹೇಳಿವೆ.

ಈ ದಾಳಿಯ ಹೊಣೆಯನ್ನು ತಕ್ಷಣಕ್ಕೆ ಯಾರೂ ಹೊತ್ತುಕೊಂಡಿಲ್ಲ.

ಇರಾಕ್‌ನಲ್ಲಿರುವ ಅಮೆರಿಕದ ಸಂಸ್ಥಾಪನೆಗಳ ಮೇಲೆ ಅಕ್ಟೋಬರ್‌ನಿಂದ ಇದೇ ಮಾದರಿಯ 25ಕ್ಕೂ ಅಧಿಕ ದಾಳಿಗಳು ನಡೆದಿವೆ. ಇರಾಕ್ ಭದ್ರತಾ ಪಡೆಗಳಲ್ಲಿರುವ ಇರಾನ್ ಬೆಂಬಲಿತ ಬಣಗಳು ಈ ದಾಳಿ ನಡೆಸುತ್ತಿವೆ ಎಂದು ಅಮೆರಿಕ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News