ವಿಂಡೀಸ್ ಕ್ರಿಕೆಟ್‌ನಿಂದ ಬಿಸಿಸಿಐ ದೇಣಿಗೆ ದುರುಪಯೋಗ: ಹೋಲ್ಡಿಂಗ್

Update: 2020-05-21 04:34 GMT

ಲಂಡನ್, ಮೇ 20: ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ ) ನೀಡಿರುವ ಅರ್ಧ ಮಿಲಿಯನ್ ಯುಎಸ್ ಡಾಲರ್ ದೇಣಿಗೆಯನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ದುರುಪಯೋಗ ಮಾಡಿದೆ ಎಂದು ಮಾಜಿ ವೇಗಿಮೈಕೆಲ್ ಹೋಲ್ಡಿಂಗ್ ಆರೋಪಿಸಿದ್ದಾರೆ.

ಬಿಸಿಸಿಐ ಕ್ರಿಕೆಟ್ ವೆಸ್ಟ್ ಇಂಡೀಸ್‌ಗೆ ದೇಣಿಗೆ ನೀಡಿದ್ದು, ದ್ವೀಪ ರಾಷ್ಟ್ರಗಳಲ್ಲಿ ಆಟದ ಆಡಳಿತ ಮಂಡಳಿಯ ಹಣಕಾಸು ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಯೂಟ್ಯೂಬ್ ಕಾರ್ಯಕ್ರಮವೊಂದರಲ್ಲಿ, ಹೋಲ್ಡಿಂಗ್ ಕೆರಿಬಿಯನ್‌ನಲ್ಲಿ ಕ್ರಿಕೆಟ್ ಆಡಳಿತದ ಕುರಿತು ಪನ್ನೆಲ್ ಕೆರ್ ಫೋಸ್ಟರ್ (ಪಿಕೆಎಫ್) ಅವರ ಲೆಕ್ಕಪರಿಶೋಧನಾ ವರದಿಯನ್ನು ಪ್ರದರ್ಶಿಸಿದರು ಮತ್ತು ಹಲವು ಪ್ರಶ್ನೆಗಳನ್ನು ಎತ್ತಿದರು. ಸಿಡಬ್ಲ್ಯುಐ ತನ್ನ ಮಾಜಿ ಆಟಗಾರರ ಅನುಕೂಲಕ್ಕಾಗಿ ಭಾರತೀಯ ಕ್ರಿಕೆಟ್ ಮಂಡಳಿಯಿಂದ (ಬಿಸಿಸಿಐ) ಪಡೆದ ದೇಣಿಗೆಯ ಬಗ್ಗೆಯೂ ಮಾತನಾಡಿದರು.

  ‘‘2013-2014ರಲ್ಲಿ ಬಿಸಿಸಿಐ ನಿರ್ದಿಷ್ಟವಾಗಿ ಅರ್ಧ ಮಿಲಿಯನ್ ಯುಎಸ್ ಡಾಲರ್‌ಗಳ ದೇಣಿಗೆ ನೀಡಿತು. ನಾನು ಮಾಜಿ ಆಟಗಾರ, ನಾನು ಅದರಲ್ಲಿ ಯಾವುದನ್ನೂ ಬಯಸುವುದಿಲ್ಲ. ಆದರೆ ಹಿಂದಿನ ಬಹಳಷ್ಟು ಆಟಗಾರರನ್ನು ಕೇಳಿದ್ದೇನೆ. ಅವರಿಗೆ ಮಂಡಳಿಯಿಂದ ಶೇಕಡಾ ಒಂದರಷ್ಟು ನೆರವು ಹೋಗುವುದಿಲ್ಲ’’ ಎಂದರು.

  ಬಿಸಿಸಿಐ ನೀಡಿರುವ ಆ ಅರ್ಧ ಮಿಲಿಯನ್ ಡಾಲರ್ ಎಲ್ಲಿದೆ? ಎಂದು ತಾನು ಶೀಘ್ರದಲ್ಲೇ ಸಾರ್ವಜನಿಕರ ಗಮನ ಸೆಳೆಯುವುದಾಗಿ 66 ವರ್ಷದ ಹೋಲ್ಡಿಂಗ್ ಹೇಳಿದರು.

ಆಡಿಟ್ ವರದಿಯನ್ನು ಕೈಯಲ್ಲಿಟ್ಟು ಕೊಂಡು, ಇದು ಏಕೆ ಸಾರ್ವ ಜನಿಕವಾಗಿ ಹೋಗಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಪ್ರಧಾನ ಮಂತ್ರಿಗಳಿಗೆ ವಿವಿಧ ದ್ವೀಪ ಸಮೂಹದ ಮಾಜಿ ಅಧ್ಯಕ್ಷರು ಕೆರಿಬಿಯನ್ ಕ್ರಿಕೆಟ್ ಆಡಳಿತದ ಬಗ್ಗೆ ವಿಧಿವಿಜ್ಞಾನ ವರದಿಯನ್ನು ಕೇಳುತ್ತಿದ್ದಾರೆ. ಪ್ರಸ್ತುತ ಆಡಳಿತವು ವಿಧಿವಿಜ್ಞಾನದ ಲೆಕ್ಕಪರಿಶೋಧನೆಯನ್ನು ಮಾಡಲಿಲ್ಲ. ಆದರೆ ಅವರು ಲೆಕ್ಕಪರಿಶೋಧನೆ ನಡೆಸಿದರು. ಜನವರಿಯಲ್ಲಿ ಅವರು ವರದಿಯನ್ನು ಸಿದ್ದಪಡಿಸಿದ್ದರು. ಆದರೆ ಈವರೆಗೂ ಅದನ್ನು ಬಿಡುಗಡೆ ಮಾಡಿಲ್ಲ ಎಂದರು. ‘‘60 ಪುಟಗಳ ವರದಿಯು ಉತ್ತಮವಾಗಿ ಕಾಣುತ್ತಿಲ್ಲ. ನಾನು ಇದನ್ನು ಪರಿಶೀಲಿಸಲು ಬಯಸುತ್ತೇನೆ. ಸಿಡಬ್ಲ್ಯುಐ ಆಡಿಟ್ ವರದಿಯನ್ನು ಬಹಿರಂಗ ಗೊಳಿಸಬೇಕು ಎಂದು ಹೋಲ್ಡಿಂಗ್ ಹೇಳಿದರು.

‘‘ಖಾಸಗಿ ಕಂಪೆನಿಯಾಗಿದ್ದರೆ ಗೌಪ್ಯತೆಯನ್ನು ಪಡೆಯಬಹುದು. ಸಾರ್ವಜನಿಕ ಷೇರುದಾರರನ್ನು ಹೊಂದಿದ್ದರೆ ನೀವು ಖಾಸಗಿ ಕಂಪೆನಿ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News