ಬ್ರೆಝಿಲ್‌ನಲ್ಲಿ ಈಗ ಎರಡನೇ ಅತಿ ಹೆಚ್ಚು ಕೊರೋನ ಸೋಂಕಿತರು

Update: 2020-05-23 17:29 GMT

ಬ್ರೆಸೀಲಿಯ (ಬ್ರೆಝಿಲ್), ಮೇ 23: ಕೊರೋನ ವೈರಸ್ ಸೋಂಕು ಪೀಡಿತರ ಜಾಗತಿಕ ಪಟ್ಟಿಯಲ್ಲಿ ರಶ್ಯವನ್ನು ಹಿಂದಿಕ್ಕಿದ ಬ್ರೆಝಿಲ್ ಎರಡನೇ ಸ್ಥಾನವನ್ನು ಆಕ್ರಮಿಸಿದೆ ಹಾಗೂ ಈಗ ಅದು ಮೊದಲ ಸ್ಥಾನದಲ್ಲಿರುವ ಅಮೆರಿಕದಿಂದ ಮಾತ್ರ ಹಿಂದಿದೆ.

ಇದರೊಂದಿಗೆ ಉತ್ತರ ಮತ್ತು ದಕ್ಷಿಣ ಅಮೆರಿಕಗಳು ಸದ್ಯಕ್ಕೆ ಕೋವಿಡ್-19ರ ಕೇಂದ್ರಬಿಂದುಗಳಾಗಿ ಮಾರ್ಪಟ್ಟಂತಾಗಿದೆ. ಅಮೆರಿಕ (ಯುಎಸ್‌ಎ)ವು ಉತ್ತರ ಅಮೆರಿಕ ಖಂಡದಲ್ಲಿದ್ದರೆ, ಬ್ರೆಝಿಲ್ ದಕ್ಷಿಣ ಅಮೆರಿಕ ಖಂಡದಲ್ಲಿದೆ.

ಬ್ರೆಝಿಲ್‌ನಲ್ಲಿ ಈಗ ಕೋವಿಡ್-19 ಸೋಂಕಿತರ ಸಂಖ್ಯೆ 3,30,890ನ್ನು ತಲುಪಿದೆ ಹಾಗೂ ಅಲ್ಲಿ ಮಾರಕ ಸಾಂಕ್ರಾಮಿಕಕ್ಕೆ 21,048 ಮಂದಿ ಬಲಿಯಾಗಿದ್ದಾರೆ. ಆದರೆ. ಇಲ್ಲಿ ಹೆಚ್ಚೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಿದರೆ, ಸೋಂಕಿಗೊಳಗಾಗಿರುವ ಸಂಖ್ಯೆ ಇದಕ್ಕಿಂತ 15 ಪಟ್ಟು ಅಥವಾ ಅದಕ್ಕಿಂತಲೂ ಹೆಚ್ಚಾಗಬಹುದು ಎಂದು ಪರಿಣತರು ಎಚ್ಚರಿಸುತ್ತಾರೆ.

ಬ್ರೆಝಿಲ್‌ನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊರೋನ ವೈರಸ್‌ಗೆ 1,001 ಮಂದಿ ಬಲಿಯಾಗಿದ್ದಾರೆ. ಅಲ್ಲಿ 1,000ಕ್ಕಿಂತಲೂ ಹೆಚ್ಚಿನ ಸಾವುಗಳು ಸಂಭವಿಸುತ್ತಿರುವುದು ನಾಲ್ಕು ದಿನಗಳಲ್ಲಿ ಇದು ಮೂರನೇ ಬಾರಿಯಾಗಿದೆ.

ದಕ್ಷಿಣ ಅಮೆರಿಕವು ಕೊರೋನ ವೈರಸ್ ಸಾಂಕ್ರಾಮಿಕದ ನೂತನ ಕೇಂದ್ರಬಿಂದುವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸುತ್ತಿರುವಂತೆಯೇ, ಬ್ರೆಝಿಲ್‌ನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News