ಪಾಕ್ ಮಾಜಿ ಆರಂಭಿಕ ಆಟಗಾರ ತೌಫೀಕ್ ಉಮರ್‌ಗೆ ಕೋವಿಡ್-19

Update: 2020-05-24 10:42 GMT

ಕರಾಚಿ, ಮೇ 24: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತೌಫೀಕ್ ಉಮರ್ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ.

‘‘ಶನಿವಾರ ರಾತ್ರಿ ಕೊರೋನ ವೈರಸ್ ರೋಗ ಲಕ್ಷಣ ಕಾಣಿಸಿಕೊಂಡ ಕಾರಣ ಸ್ವತಃ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದೆ. ಫಲಿತಾಂಶ ಪಾಸಿಟಿವ್ ಆಗಿದೆ. ನನ್ನ ರೋಗದ ಗುಣಲಕ್ಷಣ ಅಷ್ಟೊಂದು ತೀವ್ರವಾಗಿಲ್ಲ. ಇದೀಗ ಸ್ವತಃ ಮನೆಯಲ್ಲಿ ಪ್ರತ್ಯೇಕವಾಗಿದ್ದೇನೆ. ನಾನು ಬೇಗನೆ ಚೇತರಿಸಿಕೊಳ್ಳಲು ಎಲ್ಲರೂ ಪ್ರಾರ್ಥಿಸಬೇಕೆಂದು ವಿನಂತಿಸುವೆ’’ಎಂದು ಉಮರ್ ಹೇಳಿದ್ದಾರೆ.

ಎಡಗೈ ಬ್ಯಾಟ್ಸ್‌ಮನ್ ಉಮರ್ ಕೊರೋನ ಸೋಂಕಿಗೆ ಒಳಗಾಗಿರುವ ಪಾಕ್‌ನ ಎರಡನೇ ಕ್ರಿಕೆಟಿಗನಾಗಿದ್ದಾರೆ. ಕಳೆದ ತಿಂಗಳು ನಿಧನರಾದ 50ರ ವಯಸ್ಸಿನ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಝಾಫರ್ ಸರ್ಫರಾಝ್‌ಗೆ ಕೊರೋನ ಕಾಣಿಸಿಕೊಂಡಿತ್ತು.

ಲಾಹೋರ್ ಮೂಲದ ಉಮರ್ ಪಾಕಿಸ್ತಾನವನ್ನು 44 ಟೆಸ್ಟ್ ಹಾಗೂ 22 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News