ಬ್ರೆಝಿಲ್‌ನಿಂದ ಅಮೆರಿಕಕ್ಕೆ ಪ್ರಯಾಣ ನಿಷೇಧಿಸಿದ ಟ್ರಂಪ್

Update: 2020-05-25 16:31 GMT

ವಾಶಿಂಗ್ಟನ್, ಮೇ 25: ಕೊರೋನ ವೈರಸ್ ಸಾಂಕ್ರಾಮಿಕದ ನೂತನ ಹಾಟ್‌ಸ್ಪಾಟ್ (ಕೇಂದ್ರಬಿಂದು) ಆಗಿ ಹೊರಹೊಮ್ಮಿರುವ ಬ್ರೆಝಿಲ್‌ನಿಂದ ಅಮೆರಿಕಕ್ಕೆ ಜನರು ಪ್ರಯಾಣಿಸುವುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ನಿಷೇಧಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ಅಮೆರಿಕದ ಪ್ರಜೆಗಳಲ್ಲದವರು ಅಮೆರಿಕಕ್ಕೆ ಬರಬೇಕೆಂದು ನಿರ್ಧರಿಸುವ ಮುನ್ನ 14 ದಿನಗಳು ಬ್ರೆಝಿಲ್‌ನಲ್ಲಿದ್ದರೆ ಅವರು ಅಮೆರಿಕಕ್ಕೆ ಬರುವಂತಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೇಲೀ ಮೆಕ್‌ಎನನಿ ತಿಳಿಸಿದರು. ಈ ನಿಯಮದಿಂದ ವ್ಯಾಪಾರಕ್ಕೆ ತೊಂದರೆಯಾಗುವುದಿಲ್ಲ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದರು.

ಬ್ರೆಝಿಲ್‌ನಲ್ಲಿ ಕೊರೋನ ವೈರಸ್ ಸೋಂಕಿತರ ಸಂಖ್ಯೆ 3.50 ಲಕ್ಷವನ್ನು ತಲುಪಿದ್ದು, ಅಮೆರಿಕದ ಬಳಿಕ ಎರಡನೇ ಅತಿ ದೊಡ್ಡ ಸೋಂಕಿತ ದೇಶವಾಗಿದೆ. ಅಲ್ಲಿ ಕೊರೋನ ವೈರಸ್‌ನಿಂದಾಗಿ 22,000ಕ್ಕೂ ಅಧಿಕ ಸಾವುಗಳು ಸಂಭವಿಸಿವೆ.

ರಾಜಕೀಯ ಮಿತ್ರರು ಕಡು ಬಲಪಂಥೀಯನಾಗಿರುವ ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ರಾಜಕೀಯ ಮಿತ್ರನಾಗಿದ್ದಾರೆ. ಅವರ ಅಸಂಗತ ಮಾತುಗಳಿಗಾಗಿ ಅವರನ್ನು ಟ್ರೋಪಿಕಲ್ (ಉಷ್ಣವಲಯದ) ಟ್ರಂಪ್ ಎಂಬುದಾಗಿಯೂ ಕರೆಯಲಾಗುತ್ತಿದೆ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News