ಬೆಲ್ಟ್ ಆ್ಯಂಡ್ ರೋಡ್ ಮೇಲೆ ಕೊರೋನ ವೈರಸ್ ಪರಿಣಾಮ: ಚೀನಾ

Update: 2020-05-25 16:52 GMT

ಬೀಜಿಂಗ್, ಮೇ 25: ತನ್ನ ಬೃಹತ್ ವೆಚ್ಚದ ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್ (ಬಿಆರ್‌ಐ) ಯೋಜನೆಗೆ ಕೊರೋನ ವೈರಸ್ ಸಾಂಕ್ರಾಮಿಕದ ಪರಿಣಾಮ ತಟ್ಟಿದೆ ಎನ್ನುವುದನ್ನು ಚೀನಾ ರವಿವಾರ ಒಪ್ಪಿಕೊಂಡಿದೆ. ಆದರೆ, ಈ ಪರಿಣಾಮವು ತಾತ್ಕಾಲಿಕ ಮತ್ತು ಸೀಮಿತ ಎಂದು ಅದು ಹೇಳಿದೆ.

ಕೊರೋನ ವೈರಸ್ ಸಾಂಕ್ರಾಮಿಕವು ಬಿಆರ್‌ಐ ಸಹಕಾರವನ್ನು ಬಲಪಡಿಸುತ್ತದೆ ಹಾಗೂ ಪುನಶ್ಚೇತನಗೊಳಿಸುತ್ತದೆ ಹಾಗೂ, ಅದೇ ವೇಳೆ, ಹೊಸ ಸಾಧ್ಯತೆಗಳನ್ನು ತೆರೆಯುತ್ತದೆ ಎಂದು ಚೀನಾದ ವಿದೇಶ ಸಚಿವ ವಾಂಗ್ ಯಿ ಹೇಳಿದರು.

ಕೋವಿಡ್-19 ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ವಿಸ್ತರಣೆಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬಿಆರ್‌ಐ ಯೋಜನೆ ವಿಸ್ತರಣೆಗೂ ಒತ್ತು ದೊರೆಯಲಿದೆ ಎಂದರು.

ಬೆಲ್ಡ್ ಆ್ಯಂಡ್ ರೋಡ್ ಇನಿಶಿಯೇಟಿವ್‌ನ ಸಹಕಾರದ ಮೇಲೆ ಕೊರೋನ ವೈರಸ್ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಿದೆ. ಆದರೆ, ಈ ಪರಿಣಾಮವು ತಾತ್ಕಾಲಿಕ ಹಾಗೂ ಸೀಮಿತ ಎಂದು ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಚೀನಾ ವಿದೇಶ ಸಚಿವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News