ಕೊರೋನಗೆ ಚಿಕಿತ್ಸೆ: ಮಲೇರಿಯಾ ಔಷಧಿ ಪ್ರಯೋಗವನ್ನು ಅಮಾನತುಗೊಳಿಸಿದ ವಿಶ್ವ ಆರೋಗ್ಯ ಸಂಸ್ಥೆ

Update: 2020-05-26 17:32 GMT

ಜಿನೆವಾ,ಮೇ 26: ಕೋವಿಡ್-19 ರೋಗಿಗಳಲ್ಲಿ ಮಲೇರಿಯ ಔಷಧಿ ಹೈಡ್ರಾಕ್ಸಿಕ್ಲೋರೊಕ್ವಿನ್‌ನ ವೈದ್ಯಕೀಯ ಪ್ರಯೋಗವನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯು ಸುರಕ್ಷತಾ ಕಳವಳಗಳಿಂದಾಗಿ ಅಮಾನತುಗೊಳಿಸಿದೆ ಎಂದು ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಟೆಡ್ರಾಸ್ ಅಧಾನಮ್ ಬ್ರೆಯೆಸಸ್ ಅವರು ತಿಳಿಸಿದ್ದಾರೆ.

ಕೊರೋನ ವೈರಸ್ ಸೋಂಕಿಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಸಂಭಾವ್ಯ ಚಿಕಿತ್ಸೆಯಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವರು ಶಿಫಾರಸು ಮಾಡಿದ್ದರು. ಸೋಂಕನ್ನು ತಡೆಯಲು ತಾನು ಈ ಔಷಧಿಯನ್ನು ಸೇವಿಸುತ್ತಿದ್ದೇನೆ ಎಂದೂ ಟ್ರಂಪ್ ಹೇಳಿಕೊಂಡಿದ್ದರು.

ಹೈಡ್ರಾಕ್ಸಿಕ್ಲೋರೊಕ್ವಿನ್‌ನ ಸುರಕ್ಷತೆಯ ಬಗ್ಗೆ ಪ್ರಶ್ನೆಗಳೆದ್ದಿರುವುದರಿಂದ ರೋಗಿಗಳ ಮೇಲೆ ಅದರ ಕ್ಲಿನಿಕಲ್ ಟ್ರಯಲ್‌ಗೆ ತಾತ್ಕಾಲಿಕವಾಗಿ ತಡೆಯನ್ನು ನೀಡಲಾಗಿದೆ. ಆದರೆ ವೈರಸ್‌ಗೆ ಸಂಭಾವ್ಯ ಚಿಕಿತ್ಸೆ ಕಂಡುಕೊಳ್ಳಲು ಇತರ ಪ್ರಯೋಗಗಳು ಮುಂದುವರಿಯಲಿವೆ ಎಂದು ಬ್ರೆಯೆಸಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News