ಕೊರೋನ ಆಸ್ಪತ್ರೆಗೆ ಬೆಂಕಿ: 4 ರೋಗಿಗಳ ಸಾವು

Update: 2020-05-28 18:03 GMT
ಫೋಟೊ ಕೃಪೆ: Dhaka Tribune

ಢಾಕಾ (ಬಾಂಗ್ಲಾದೇಶ), ಮೇ 28: ಬಾಂಗ್ಲಾದೇಶದ ರಾಜಧಾನಿ ಢಾಕಾದ ಆಸ್ಪತ್ರೆಯೊಂದರಲ್ಲಿ ಸಂಭವಿಸಿದ ಬೆಂಕಿ ಅಪಘಾತದಲ್ಲಿ ನಾಲ್ವರು ಕೊರೋನ ವೈರಸ್ ರೋಗಿಗಳು ಮೃತಪಟ್ಟಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಕಿ ಅಪಘಾತಕ್ಕೆ ಕಾರಣ ತಕ್ಷಣಕ್ಕೆ ಗೊತ್ತಾಗಿಲ್ಲ ಎಂದು ಅವರು ಹೇಳಿದ್ದಾರೆ. ಬೆಂಕಿ ಹೊತ್ತಿದ ಬಳಿಕ ಸುಮಾರು ಒಂದು ಗಂಟೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು ಎಂದರು.

ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಯುನೈಟೆಡ್ ಹಾಸ್ಪಿಟಲ್‌ನ ಪ್ರತ್ಯೇಕಿತ ಘಟಕದಿಂದ ಐದು ಮೃತದೇಹಗಳನ್ನು ಹೊರಗೆ ತರಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದರು. ಮೃತರಲ್ಲಿ ನಾಲ್ವರು ಪುರುಷರು ಮತ್ತು ಓರ್ವ ಮಹಿಳೆ.

ಹೆಚ್ಚುತ್ತಿರುವ ಕೊರೋನ ವೈರಸ್ ರೋಗಿಗಳನ್ನು ನಿಭಾಯಿಸಲು ಬಾಂಗ್ಲಾದೇಶದ ಆಸ್ಪತ್ರೆಗಳು ಪರದಾಡುತ್ತಿವೆ. ದೇಶದಲ್ಲಿ ಈವರೆಗೆ 38,292 ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿವೆ ಹಾಗೂ ಈ ಪೈಕಿ 544 ಮಂದಿ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News