ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಇನ್ನಷ್ಟು ಇಳಿಕೆ

Update: 2020-06-15 16:29 GMT

ಟೋಕಿಯೊ (ಜಪಾನ್), ಜೂ. 15: ಕೊರೋನ ವೈರಸ್ ಮತ್ತೆ ಕಾಣಿಸಿಕೊಳ್ಳಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ ಜಾಗತಿಕದ ಮಟ್ಟದಲ್ಲಿ ತೈಲ ಬೆಲೆ ಇನ್ನಷ್ಟು ಕುಸಿದಿದೆ.

ಬ್ರೆಂಟ್ ಕಂಪೆನಿಯ ಕಚ್ಚಾತೈಲದ ಬೆಲೆಯು ಬ್ಯಾರಲ್‌ಗೆ 1.32 ಡಾಲರ್ (ಸುಮಾರು 100 ರೂಪಾಯಿ)ನಷ್ಟು ಕಡಿಮೆಯಾಗಿದ್ದು 37.41 ಡಾಲರ್ (ಸುಮಾರು 2,845 ರೂಪಾಯಿ)ನಲ್ಲಿ ನೆಲೆಗೊಂಡಿದೆ. ಇದು ಒಟ್ಟಾರೆ 3.4 ಶೇಕಡ ಇಳಿಕೆಯಾಗಿದೆ.

ಅದೇ ವೇಳೆ, ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯಟ್ ಕಂಪೆನಿಯ ಕಚ್ಚಾತೈಲ ಬೆಲೆಯು ಬ್ಯಾರಲ್‌ಗೆ 1.75 ಡಾಲರ್ (133 ರೂಪಾಯಿ)ನಷ್ಟು ಇಳಿದು 34.51 ಡಾಲರ್ (ಸುಮಾರು 2,624 ರೂಪಾಯಿ)ನಲ್ಲಿ ನೆಲೆಗೊಂಡಿದೆ. ಇದು 4.8 ಶೇಕಡ ಇಳಿಕೆಯಾಗಿದೆ.

ಚೀನಾ, ಜಪಾನ್ ಮತ್ತು ಅಮೆರಿಕಗಳಲ್ಲಿ ಹೊಸ ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದು ತೈಲ ಬೇಡಿಕೆಗೆ ಮಾರಕವಾಗಬಹುದು ಎಂಬ ಭೀತಿಯಲ್ಲಿ ಈ ಬೆಲೆ ಕುಸಿತ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News