ಪಾಕ್‌ನ ಮೂವರು ಕ್ರಿಕೆಟಿಗರಿಗೆ ಕೋವಿಡ್-19 ದೃಢ

Update: 2020-06-23 06:33 GMT
Photo: Twitter (@TheRealPCBMedia)
 

ಲಾಹೋರ್, ಜೂ.22: ಆಲ್‌ರೌಂಡರ್ ಶಾದಾಬ್ ಖಾನ್, ಯುವ ಬ್ಯಾಟ್ಸ್‌ಮನ್ ಹೈದರ್ ಅಲಿ ಹಾಗೂ ವೇಗದ ಬೌಲರ್ ಹಾರಿಸ್ ರವೂಫ್‌ಗೆ ಕೋವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಸೋಮವಾರ ಖಚಿತಪಡಿಸಿದೆ.

ಕೋವಿಡ್-19 ಪರೀಕ್ಷೆಗೆ ಮೊದಲು ಎಲ್ಲ ಮೂವರು ಆಟಗಾರರಿಗೆ ಸೋಂಕಿನ ಗುಣಲಕ್ಷಣ ಕಂಡುಬಂದಿರಲಿಲ್ಲ. ಪಾಕಿಸ್ತಾನ ತಂಡ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳುವ ಮೊದಲು ಮೂವರು ರಾವಲ್ಪಿಂಡಿಯಲ್ಲಿ ಪರೀಕ್ಷೆಗೆ ಒಳಗಾಗಿದ್ದರು. ಮೂವರು ಆಟಗಾರರಿಗೆ ತಕ್ಷಣವೇ ಸ್ವಯಂ ಪ್ರತ್ಯೇಕವಾಸವಾಗಿರಲು ಸೂಚಿಸಲಾಗಿದೆ ಎಂದು ಪಿಸಿಬಿ ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News