ಬೀಜಿಂಗ್‌ನಲ್ಲಿ ಕೊರೋನ ನಿಯಂತ್ರಣಕ್ಕೆ ಬಂದಿದೆ ಎಂದ ಚೀನಾ
ಬೀಜಿಂಗ್,ಜೂ.24: ಜೂನ್ ತಿಂಗಳ ಆರಂಭದಿಂದೀಚೆಗೆ ರಾಜಧಾನಿ ಬೀಜಿಂಗ್‌ನಲ್ಲಿ ಹಾವಳಿಯೆಬ್ಬಿಸಿರುವ ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ಬಂದಿರುವುದಾಗಿ ಚೀನಾ ತಿಳಿಸಿದೆ. ಬೀಜಿಂಗ್‌ನಲ್ಲಿ 256 ಮಂದಿಗೆ ಸೋಂಕು ತಗಲಿತ್ತು. ಆದಾಗ್ಯೂ ಸೋಂಕು ಸಾಮುದಾಯಿಕವಾಗಿ ಹರಡುವ ಭೀತಿ ಇನ್ನೂ ಉಳಿದುಕೊಂಡಿದೆಯೆಂದು ಮೂಲಗಳು ತಿಳಿಸಿವೆ.
ಜೂನ್ 11ರಂದು ಬೀಜಿಂಗ್‌ನ ಬೃಹತ್ ಸಗಟು ಆಹಾರ ಮಾರುಕಟ್ಟೆಯಲ್ಲಿ ಕೊರೋನ ಸೋಂಕಿನ ಮೊದಲ ಪ್ರಕರಣ ವರದಿಯಾದ ಬೆನ್ನಲ್ಲೇ ಚೀನಾದ ಆರೋಗ್ಯ ಅಧಿಕಾರಿಗಳು ರೋಗ ಹರಡುವುದನ್ನು ಮಟ್ಟಹಾಕಲು ತುರ್ತು ಕ್ರಮಗಳಿಗೆ ಮುಂದಾಗಿದ್ದರು. ಅಲ್ಲದೆ ಬೀಜಿಂಗ್ ನಗರಕ್ಕೆ ಭಾಗಶಃ ಲಾಕ್‌ಡೌನ್ ಹೇರಲಾಗಿತ್ತು.
ಬೀಜಿಂಗ್‌ನಲ್ಲಿ ಕಾಣಿಸಿಕೊಂಡಿದ್ದ ಕೋವಿಡ್-19 ಸಾಂಕ್ರಾಮಿಕವು ಈಗ ನಿಯಂತ್ರಣಕ್ಕೆ ಬಂದಿದೆ. ಇದೇ ವೇಳೆ ಮನೆ,ಕೆಲಸದ ಸ್ಥಳಗಳಲ್ಲಿ ಸೋಂಕು ಹರಡಿರುವುದನ್ನು ಹಾಗೂ ಸಮುದಾಯಿಕ ಹರಡುವಿಕೆಯ ಪ್ರಕರಣಗಳನ್ನು ನಾವು ಪತ್ತೆಹಚ್ಚಿದ್ದೇವೆ’’ ಎಂದು ಬೀಜಿಂಗ್ ನಗರಪಾಲಿಕೆಯ ವಕ್ತಾರ ಕ್ಸುಹೆಜಿಯಾನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೀಜಿಂಗ್‌ನಲ್ಲಿ ವರದಿಯಾದ 256 ಪ್ರಕರಣಗಳ ಪೈಕಿ 253, ನಗರದ ಕ್ಸಿನ್‌ಫಾದಿ ಮಾರುಕಟ್ಟೆ ಪ್ರದೇಶದ ಸೋಂಕು ಪ್ರಕರಣದ ಜೊತೆ ನೇರವಾದ ಸಂಬಂಧ ಹೊಂದಿದ್ದವು ಎದಂು ಚೀನಿ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ ಸಬುದವಾರ ನಗರದಲ್ಲಿ 7 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ.