×
Ad

ವಿಶ್ವದಾದ್ಯಂತ ಕೋವಿಡ್-19ಗೆ 4.75 ಲಕ್ಷ ಮಂದಿ ಬಲಿ

Update: 2020-06-24 23:29 IST

ಪ್ಯಾರಿಸ್, ಜೂ.24: ವಿಶ್ವದಾದ್ಯಂತ ಕೊರೋನ ವೈರಸ್ ಸೋಂಕು ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಈವರೆಗೆ ಈ ಮಹಾಮಾರಿಗೆ ಬಲಿಯಾದವರ ಸಂಖ್ಯೆ 4.75 ಲಕ್ಷವನ್ನು ದಾಟಿದೆ.

ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಕಳೆದ ಎರಡು ತಿಂಗಳುಗಳಲ್ಲಿ ಎರಡು ಪಟ್ಟು ಏರಿಕೆಯಾಗಿದೆ. ಸೋಂಕಿತರ ಸಂಖ್ಯೆಯಲ್ಲಿಯೂ ವ್ಯಾಪಕವಾಗಿ ಹೆಚ್ಚಳವಾಗುತ್ತಿದ್ದು, 92,63,743 ಮಂದಿಗೆ ಸೋಂಕು ತಗಲಿದೆ.

  ಯುರೋಪ್ ಖಂಡ ಕೊರೋನ ಹಾವಳಿಯಿಂದ ಅತ್ಯಧಿಕವಾಗಿ ತತ್ತರಿಸಿದ್ದು, ಅಲ್ಲಿ ಈವರೆಗೆ 1,93,800 ಮಂದಿ ಕೋವಿಡ್-19ನಿಂದ ಮೃತಪಟ್ಟಿದ್ದಾರೆ ಹಾಗೂ 25,57,761 ಪ್ರಕರಣಗಳು ವರದಿಯಾಗಿವೆ. ಆದರೆ ಲ್ಯಾಟಿನ್ ಆಮೆರಿಕದ ರಾಷ್ಟ್ರಗಳಲ್ಲೂ ಕೊರೋನ ಸೋಂಕು ಶರವೇಗದಲ್ಲಿ ವ್ಯಾಪಿಸುತಿದ್ದು, ಅಲ್ಲಿ 1.38 ಲಕ್ಷ ಮಂದಿ ಮೃತಪಟ್ಚಿದ್ದಾರೆ ಹಾಗೂ 21,63,835 ಸೋಂಕಿತರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News