ಭಾರತಕ್ಕೆ ಸ್ಪಿನ್ ಬೌಲಿಂಗ್ ಕೋಚ್ ಅಗತ್ಯ

Update: 2020-06-28 05:22 GMT

ಕೋಲ್ಕತಾ, ಜೂ.27: ಟೀಮ್ ಇಂಡಿಯಾದ ಸ್ಪಿನ್ ದಾಳಿಯಲ್ಲಿ ಉಜ್ವಲ ಭವಿಷ್ಯ ಕಾಣುತ್ತಿಲ್ಲ ಎಂದಿರುವ ಭಾರತದ ಮಾಜಿ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ತಂಡದಲ್ಲಿ ಉತ್ತಮ ಸ್ಪಿನ್ನರ್‌ಗಳ ಕೊರತೆ ಇದೆ ಎಂದಿದ್ದಾರೆ.

‘‘ನನ್ನ ಪ್ರಕಾರ ಭಾರತಕ್ಕೆ ಸ್ಪಿನ್ ಬೌಲಿಂಗ್ ಕೋಚ್ ಅಗತ್ಯವಿದೆ. ಆದರೆ, ನಾನು ಕೋಚ್ ಆಕಾಂಕ್ಷಿಯಲ್ಲ. ಇದೀಗ ದೇಶದಲ್ಲಿ ಸ್ಪಿನ್ನರ್‌ಗಳನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ನನಗೆ ತೃಪ್ತಿ ಇಲ್ಲ’’ಎಂದು ಭಾರತೀಯ ಮಹಿಳಾ ತಂಡದ ಕೋಚ್ ಡಬ್ಲುವಿ ರಾಮನ್ ಜೊತೆಗಿನ ‘ಇನ್‌ಸೈಡ್ ಔಟ್’ ಚಾಟ್ ಶೋ ವೇಳೆ ಹೇಳಿದ್ದಾರೆ.

ತಮಿಳುನಾಡಿನ ಮಾಜಿ ಆಟಗಾರ ತನ್ನ ವೃತ್ತಿಜೀವನವನ್ನು ನೆನಪಿಸಿಕೊಂಡರು.

‘‘ನಾನು ಯಾವಾಗಲೂ ಸುನೀಲ್ ಗವಾಸ್ಕರ್ ನಾಯಕತ್ವದಡಿ ಉತ್ತಮ ಪ್ರದರ್ಶನ ನೀಡಿದ್ದೆ. ಆದರೆ, ಕಪಿಲ್‌ದೇವ್ ನೇತೃತ್ವದಲ್ಲಿ ನಾನು ಚೆನ್ನಾಗಿ ಆಡಿರಲಿಲ್ಲ. ಕಪಿಲ್ ಸಹಜ ನಾಯಕನಾಗಿದ್ದರು. ಆದರೆ, ಗವಾಸ್ಕರ್ ನಾಯಕನಾಗಿ ಯೋಜನೆಯನ್ನು ರೂಪಿಸುತ್ತಿದ್ದರು. ತಾನೇನು ನಿರೀಕ್ಷಿಸುತ್ತಿರುವೆ ಎಂದು ನಮಗೆ ಹೇಳುತ್ತಿದ್ದರು’’ ಎಂದು ಶಿವರಾಮಕೃಷ್ಣನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News