ಮೆಸ್ಸಿ 700ನೇ ಗೋಲು ಮೆಲುಗಲ್ಲು: ಲಾ ಲಿಗಾ ಟೂರ್ನಿ

Update: 2020-07-02 05:46 GMT

ಮ್ಯಾಡ್ರಿಡ್: ಬಾರ್ಸಿಲೋನಾ ಮತ್ತು ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ತನ್ನ ವೃತ್ತಿ ಬದುಕಿನ 700ನೇ ಗೋಲುಗಳ ಹೆಗ್ಗುರುತನ್ನು ತಲುಪಿದ್ದಾರೆ

 ಲಾ ಲಿಗಾ ಟೂರ್ನಿಯಲ್ಲಿ ಕ್ಯಾಂಪ್‌ನೌನಲ್ಲಿ ಮಂಗಳವಾರ ನಡೆದ ಅಟ್ಲೆಟಿಕೊ ಮ್ಯಾಡ್ರಿಡ್ ವಿರುದ್ಧ ಪಂದ್ಯದಲ್ಲಿ ಬಾರ್ಸಿಲೋನಾದ ಅರ್ಜೆಂಟೀನಾ ಫಾರ್ವರ್ಡ್ ಲಿಯೊನೆಲ್ ಮೆಸ್ಸಿ ದ್ವಿತೀಯಾರ್ಧದಲ್ಲಿ ಪೆನಾಲ್ಟಿ ಅವಕಾಶದಲ್ಲಿ ಗೋಲ್‌ಗಳಿಸುವ ಮೂಲಕ ತಮ್ಮ ವೃತ್ತಿಜೀವನದ 700ನೇ ಮೈಲುಗಲ್ಲನ್ನು ಮುಟ್ಟಿದರು.

ಈ ಪಂದ್ಯ 2-2 ಗೋಲ್‌ಗಳಿಂದ ಡ್ರಾದಲ್ಲಿ ಕೊನೆಗೊಂಡಿತ್ತು.

11ನೇ ನಿಮಿಷದಲ್ಲಿ ಎದುರಾಳಿ ಅಟ್ಲೆಟಿಕೊ ತಂಡದ ಸ್ಟ್ರೈಕರ್ ಡಿಯಾಗೊ ಕೋಸ್ಟಾ ಸ್ವಯಂ ಗೋಲು ಗಳಿಸಿ ಯಡವಟ್ಟು ಮಾಡಿಕೊಂಡಿದ್ದರು. ಇದು ಬಾರ್ಸಿಲೋನಾಕ್ಕೆ 1-0 ಮುನ್ನಡೆ ಸಾಧಿಸಲು ನೆರವಾಗಿತ್ತು.ಆದರೆ 19ನೇ ನಿಮಿಷದಲ್ಲಿ ಸಾಲ್ ನಿಗುಯೆಝ್ ಪೆನಾಲ್ಟಿ ಗೋಲು ದಾಖಲಿಸಿ 1-1 ಸಮಬಲ ಸಾಧಿಸಿದರು. ಬಾರ್ಸಿಲೋನದ ಸಾರ್ವಕಾಲಿಕ ಅಗ್ರ ಸ್ಕೋರರ್ ಮೆಸ್ಸಿ 50ನೇ ನಿಮಿಷದಲ್ಲಿ ಗೋಲ್ ಕೀಪರ್ ಜಾನ್ ಒಬ್ಲಾಕ್ ಅವರ ಕಣ್ಣು ತಪ್ಪಿಸಿ ಗೋಲು ಗಳಿಸಿ ತಂಡಕ್ಕೆ 2-1 ಮುನ್ನಡೆ ಸಾಧಿಸಲು ನೆರವಾದರು. 62ನೇ ನಿಮಿಷದಲ್ಲಿ ನಿಗುಯೆಝ್ ಇನ್ನೊಂದು ಪೆನಾಲ್ಟಿ ಅವಕಾಶದಲ್ಲಿ ಗೋಲು ಕಬಳಿಸಿದರು. ಇದರೊಂದಿಗೆ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News