5 ಗಂಟೆಗಳ ಕಾಲ ಸಂಗಕ್ಕಾರ ವಿಚಾರಣೆ

Update: 2020-07-03 05:36 GMT

ಕೊಲಂಬೊ, ಜು.2: ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ಅವರನ್ನು ಐದು ಗಂಟೆಗಳಿಗಿಂತ ಹೆಚ್ಚು ಕಾಲ ಪೊಲೀಸರ ವಿಶೇಷ ತನಿಖಾ ತಂಡ ವಿಚಾರಣೆಗೊಳಪಡಿಸಿದೆ. ಆಧಾರರಹಿತ ಮ್ಯಾಚ್ ಫಿಕ್ಸಿಂಗ್ ಆರೋಪಗಳ ಮೇಲೆ ಕುಮಾರ ಸಂಗಕ್ಕರ ಮತ್ತು ಇತರ ಕ್ರಿಕೆಟಿಗರಿಗೆ ನಿರಂತರ ಕಿರುಕುಳ ನೀಡಲಾಗುತ್ತದೆ ಎಂದು ಆರೋಪಿಸಿ ಇದೇ ವೇಳೆ ಶ್ರೀಲಂಕಾ ಕ್ರೀಡಾ ಸಚಿವಾಲಯದ ಮುಂದೆ ‘ಸಮಗಿ ಜನ ಬಾಲವೇಗಯಾ’ ಸಂಘಟನೆಯ ಯುವ ವಿಭಾಗದ ಸದಸ್ಯರು ಪ್ರತಿಭಟನೆ ನಡೆಸಿದರು.

2011ರ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ತಂಡ ಸೋಲನುಭವಿಸುವಾಗ ಕುಮಾರ ಸಂಗಕ್ಕರ ತಂಡದ ನಾಯಕರಾಗಿದ್ದರು. ರಾಷ್ಟ್ರೀಯ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಅರವಿಂದ ಡಿ ಸಿಲ್ವಾ ಮತ್ತು ಶ್ರೀಲಂಕಾ ಆರಂಭಿಕ ಆಟಗಾರ ಉಪುಲ್ ತರಂಗ ಅವರಿಂದ ಈಗಾಗಲೇ ಹೇಳಿಕೆಗಳನ್ನು ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News