ಭಾರತೀಯ ಕೋಚ್‌ಗಳಿಗೆ 2 ಲಕ್ಷ ರೂ.ವೇತನ ಮಿತಿ ರದ್ಧತಿಗೆ ಕ್ರೀಡಾ ಸಚಿವಾಲಯ ಅಸ್ತು

Update: 2020-07-05 13:55 GMT

ಹೊಸದಿಲ್ಲಿ, ಜು.4: ಕ್ರೀಡಾಪಟುಗಳಿಂದ ಉತ್ತಮ ಫಲಿತಾಂಶಗಳನ್ನು ದೊರೆಯುವಂತೆ ಪ್ರೋತ್ಸಾಹಿಸಲು ಮತ್ತು ಮಾಜಿ ಆಟಗಾರರನ್ನು ಉನ್ನತ ತರಬೇತುದಾರರನ್ನಾಗಿ ಆಕರ್ಷಿಸಲು ಕ್ರೀಡಾಪಟುಗಳಿಗೆ ತರಬೇತಿ ನೀಡುವ ಕೋಚ್‌ಗಳಿಗೆ ನೀಡಲಾಗುವ ವೇತನ ಎರಡು ಲಕ್ಷ ರೂ.ಗರಿಷ್ಠ ಮಿತಿಯನ್ನು ತೆಗೆದುಹಾಕುವುದಾಗಿ ಕ್ರೀಡಾ ಸಚಿವಾಲಯ ಶನಿವಾರ ಪ್ರಕಟಿಸಿದೆ.

ಎಲ್ಲಾ ವಿದೇಶಿ ಕೋಚ್‌ಗಳ ಒಪ್ಪಂದಗಳನ್ನು ಮುಂದಿನ ವರ್ಷದ ಸೆಪ್ಟಂಬರ್30ರವರೆಗೆ ವಿಸ್ತರಿಸಲಾಗಿದೆ. ಮುಂದೆ ಭಾರತ ಮತ್ತು ವಿದೇಶಿ ಕೋಚ್‌ಗಳ ನೇಮಕಾತಿಯನ್ನು ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಒಲಿಂಪಿಕ್ಸ್ ತಯಾರಿಗೆ ಪೂರಕವಾಗಿರುವಂತೆ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಗುರುವಾರ ಸಚಿವಾಲಯದ ತೀರ್ಮಾನದ ನಂತರ ಈ ಪ್ರಕಟನೆೆ ಹೊರ ಬಂದಿದೆ.

‘‘ಹಲವು ಮಂದಿ ಭಾರತೀಯ ಕೋಚ್‌ಗಳು ಉತ್ತಮ ಫಲಿತಾಂಶಗಳನ್ನು ತೋರಿಸುತ್ತಿದ್ದಾರೆ ಮತ್ತು ಅವರ ಕಠಿಣ ಪರಿಶ್ರಮಕ್ಕೆ ಬಹುಮಾನ ನೀಡಬೇಕಾಗಿದೆ. ಗಣ್ಯ ಕ್ರೀಡಾಪಟುಗಳಿಗೆ ತರಬೇತಿ ನೀಡಲು ದೇಶದ ಅತ್ಯುತ್ತಮ ಕೋಚಿಂಗ್ ಪ್ರತಿಭೆಗಳನ್ನು ಆಕರ್ಷಿಸಲು ಸರಕಾರ ಉತ್ಸುಕವಾಗಿದೆ ಮತ್ತು ಉತ್ತಮ ಕೋಚ್‌ಗಳಿಗೆ ವೇತನದ ಮಿತಿಯನ್ನು ತೆಗೆದು ಹಾಕಲಾಗುವುದು’’ಎಂದು ಕ್ರೀಡಾ ಸಚಿವ ಕಿರೆಣ್ ರಿಜಿಜು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News