ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡದಿಂದ ಬೈರ್ ಸ್ಟೋವ್, ಅಲಿ ಔಟ್

Update: 2020-07-05 14:00 GMT

ಲಂಡನ್, ಜು.4: ಬುಧವಾರ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡದಿಂದ ಜಾನಿ ಬೈರ್‌ಸ್ಟೋವ್ ಮತ್ತು ಮೊಯಿನ್ ಅಲಿಯನ್ನು ಕೈಬಿಡಲಾಗಿದೆ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಶನಿವಾರ 22 ಸದಸ್ಯರ ತಂಡವನ್ನು ಪ್ರಕಟಿಸಿದೆ.

22ರ ಹರೆಯದ ಸ್ಪಿನ್ನರ್ ಡೊಮಿನಿಕ್ ಬೆಸ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಸರಣಿ ಗೆಲುವಿನಲ್ಲಿ ಬೆಸ್ ಪ್ರಮುಖ ಪಾತ್ರ ವಹಿಸಿದ್ದರು.

ಉಪನಾಯಕ ಜೋಸ್ ಬಟ್ಲರ್ ವಿಕೆಟ್ ಕೀಪರ್ ಆಗಿ ತಂಡದಲ್ಲಿದ್ದಾರೆ. ಬೆನ್ ಫೋಕ್ಸ್ ಅವರನ್ನು ಎರಡನೇ ವಿಕೆಟ್ ಕೀಪರ್ ಆಗಿ ಹೆಸರಿಸಲಾಗಿದೆ. 22 ಆಟಗಾರರ ಪಟ್ಟಿಯನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ . ಮೊದಲ ಆಯ್ಕೆಯ ತಂಡದಲ್ಲಿ 13 ಆಟಗಾರರಿದ್ದಾರೆ. ಉಳಿದವರು ಮೀಸಲು ಆಟಗಾರರು.

►ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಜೇಮ್ಸ್ ಆ್ಯಂಡರ್ಸನ್, ಜೋಫ್ರಾ ಆರ್ಚರ್, ಡೊಮಿನಿಕ್ ಬೆಸ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಝಕ್‌ಕ್ರಾವ್ಲೆ, ಜೋ ಡೆನ್ಲಿ, ಒಲ್ಲಿ ಪೋಪ್, ಡೊಮ್ ಸಿಬ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್.

►ಟೆಸ್ಟ್‌ಗೆ ಮೀಸಲು ಆಟಗಾರರು: ಜೇಮ್ಸ್ ಬ್ರೇಸಿ (ಗ್ಲೌಸೆಸ್ಟರ್ಶೈರ್), ಸ್ಯಾಮ್ ಕರ್ರನ್ (ಸರ್ರೆ), ಬೆನ್ ಫೋಕ್ಸ್ (ಸರ್ರೆ), ಡಾನ್ ಲಾರೆನ್ಸ್ (ಎಸೆಕ್ಸ್), ಜ್ಯಾಕ್ ಲೀಚ್ (ಸಾಮರ್ಸೆಟ್), ಸಾಕಿಬ್ ಮಹಮೂದ್ (ಲಂಕಾಷೈರ್), ಕ್ರೇಗ್ ಒವರ್ಟನ್ (ಸಾಮರ್ಸೆಟ್), ಒಲ್ಲಿ ರಾಬಿನ್ಸನ್ (ಸಸೆಕ್ಸ್), ಆಲಿ ಸ್ಟೋನ್ (ವಾರ್ವಿಕ್‌ಶೈರ್).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News