ಕೊರೋನ ವೈರಸ್ ಉಗಮದ ಅಧ್ಯಯನ: ವಿಶ್ವಸಂಸ್ಥೆಯ ತಂಡ ಚೀನಾಗೆ ಭೇಟಿ

Update: 2020-07-10 18:46 GMT

  ಬೀಜಿಂಗ್,ಜು.10: ವಿಶ್ವಸಂಸ್ಥೆಯ ಇಬ್ಬರು ತಜ್ಞರ ತಂಡವೊಂದು, ಚೀನಾದ ರಾಜಧಾನಿ ಬೀಜಿಂಗ್ ಗೆ ಆಗಮಿಸಲಿದೆ. ಎರಡು ದಿನಗಳ ಕಾಲ ಬೀಜಿಂಗ್ ನಲ್ಲಿ ತಂಗಲಿರುವ ಈ ತಂಡವು, ಕೊರೋನ ಕೊರೋನ ವೈರಸ್ ಸೋಂಕಿನ ಮೂಲಗಳ ಬಗ್ಗೆ ನಡೆಸಲಾಗುವ ವಿಸ್ತೃತ ಮಟ್ಟದ ತನಿಖೆಯ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಲಿದೆ.

 ತಂಡದ ಇಬ್ಬರು ಸದಸ್ಯರಲ್ಲಿ ಓರ್ವ ಜಾನುವಾರು ಆರೋಗ್ಯ ತಜ್ಞರಾಗಿದ್ದರೆ, ಇನ್ನೊಬ್ಬರು ಸಾಂಕ್ರಾಮಿಕ ರೋಗ ತಜ್ಞರಾಗಿದ್ದಾರೆ. ಕೊರೋನ ವೈರಸ್ ಪ್ರಾಣಿಗಳಿಂದ ಮಾನವನಿಗೆ ಹೇಗೆ ಹರಡಿತು ಎಂಬ ಬಗ್ಗೆ ಭವಿಷ್ಯತ್ತಿನಲ್ಲಿ ನಡೆಸಲಾಗುವ ಅಧ್ಯಯನದ ವ್ಯಾಪ್ತಿ ಹಾಗೂ ಮಾನದಂಡಗಳನ್ನು ತಂಡವು ನಿರ್ಧರಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News