ನಿರ್ದಿಷ್ಟ ಸಂದರ್ಭದಲ್ಲಿ ಕೊರೋನ ಗಾಳಿಯಲ್ಲೂ ಹರಡುತ್ತದೆ: ವಿಶ್ವ ಆರೋಗ್ಯ ಸಂಸ್ಥೆ

Update: 2020-07-10 17:48 GMT

ಲಂಡನ್,ಜು.10: ಕೊರೋನ ವೈರಸ್ ಕೆಲವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಗಾಳಿಯ ಮೂಲಕವೂ ಹರಡಬಹುದಾಗಿದೆ ಎಂಬ ಕೆಲವು ವಿಜ್ಞಾನಿಗಳ ಅಭಿಪ್ರಾಯವನ್ನು ವಿಶ್ವ ಆರೋಗ್ಯ ಸಂಸ್ಥೆಯು ಈಗ ಒಪ್ಪಿಕೊಂಡಿದೆ.

ಕೊರೋನ ವೈರಸ್ ಗಾಳಿಯ ಮೂಲಕವೂ ಪಸರಿಸುವ ಸಾಧ್ಯತೆಯಿದೆಯೆಂಬುದನ್ನು ಅಧಿಕೃತವಾಗಿ ಒಪ್ಪಿಕೊಳ್ಳುವಂತೆ 200ಕ್ಕೂ ಅಧಿಕ ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆಯನ್ನು ಒತ್ತಾಯಿಸಿದ್ದರು.

 ಆಸ್ಟ್ರೇಲಿಯದ ಹಾಗೂ ಅಮೆರಿಕದ ಇಬ್ಬರು ವಿಜ್ಞಾನಿಗಳು ಈ ವಾರ ವೈದ್ಯಕೀಯ ನಿಯತಕಾಲಿಕಕ್ಕೆ ಬರೆದ ಲೇಖನವೊಂದರಲ್ಲಿ, ‘‘ ಉಸಿರುಬಿಡುವಾಗ, ಮಾತನಾಡುವಾಗ ಹಾಗೂ ಕೆಮ್ಮುವಾಗ ಬಿಡುಗಡೆಯಾಗುವ ಅತ್ಯಂತ ಸೂಕ್ಷ್ಮವಾದ ದ್ರವಕಣಗಳಲ್ಲಿರುವ ವೈರಸ್ ಗಳು ಗಾಳಿಯಲ್ಲಿ ಕೆಲ ಹೊತ್ತಿನವರೆಗೂ ಉಳಿದುಕೊಳ್ಳುತ್ತವೆ ಎಂಬುದನ್ನು ಅಧ್ಯಯನದದ ಮೂಲಕ ಕಂಡುಹಿಡಿದಿರುವುದಾಗಿ ಅವರು ಹೇಳಿದ್ದಾರೆ.

 ವಿಶ್ವ ಆರೋಗ್ಯಸಂಸ್ಥೆಯು ಈತನಕ ಕೆಲವೊಂದು ಅಪಾಯಕಾರಿ ವೈದ್ಯಕೀಯ ಪ್ರಕ್ರಿಯೆಗಳ ಸಂದರ್ಭಗಳನ್ನು ಹೊರತುಪಡಿಸಿದಲ್ಲಿ ಗಾಳಿಯಲ್ಲಿ ಕೊರೋನ ವೈರಸ್ ಹರಡುವ ಸಾಧ್ಯತೆಯನ್ನು ವಿಶ್ವ ಆರೋಗ್ಯಸಂಸ್ಥೆಯು ಬಹಳ ಸಮಯದಿಂದ ಅಲ್ಲಗಳೆಯುತ್ತಾ ಬಂದಿತ್ತು.

   ಇದೀಗ ತನ್ನ ಹಿಂದಿನ ಚಿಂತನಾಕ್ರಮವನ್ನು ಬದಲಾಯಿಸಿರುವ ವಿಶ್ವ ಆರೋಗ್ಯ ಸಂಸ್ಥೆಯು ರೆಸ್ಟಾರೆಂಟ್ಗಳು, ಗಾಯನ ತರಬೇತಿ ತರಗತಿಗಳಲ್ಲಿ ಹಾಗೂ ಫಿಟ್ನೆಸ್ ಕ್ಲಾಸ್ ಗಳಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾದ ಬಳಿಕ, ಗಾಳಿಯಲ್ಲೂ ಕೊರೋನ ವೈರಸ್ ಹರಡಬಲ್ಲದು ಎಂಬುದನ್ನು ತೋರಿಸಿಕೊಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News